alex Certify ಕೋವಿಡ್-19 ನಿಂದ ರಕ್ಷಿಸಿಕೊಳ್ಳಲು ಈತ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19 ನಿಂದ ರಕ್ಷಿಸಿಕೊಳ್ಳಲು ಈತ ಮಾಡಿದ್ದೇನು ಗೊತ್ತಾ…?

ಕೊರೊನಾ ವೈರಸ್ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮಾಸ್ಕ್‌, ಮುಖದ ಶೀಲ್ಡ್‌ಗಳು, ಸ್ಯಾನಿಟೈಸರ್‌ಗಳು ಹಾಗೂ ವಿಶಿಷ್ಟ ಬಟ್ಟೆಗಳು ಇವೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ.

ಆದರೆ ಕೆಲ ವ್ಯಕ್ತಿಗಳು ಕೊರೊನಾದಿಂದ ತಮ್ಮನ್ನು ರಕ್ಷಿಸಿಕೊಳ್ಳಲೆಂದು ಒಂದು ಹೆಜ್ಜೆ ಮೇಲೆ ಹೋಗಿ, ಚಿತ್ರ ವಿಚಿತ್ರ ಉಡುಪುಗಳನ್ನು ಧರಿಸುವುದನ್ನೂ ಸಹ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಾ ಇದ್ದೇವೆ. ಇಂಥ ಒಂದು ನಿದರ್ಶನದಲ್ಲಿ, ಆಸ್ಟ್ರೇಲಿಯಾದ ಊರೊಂದರ ಬೀದಿಗಳಲ್ಲಿ ಒಂದು ವಿಶಿಷ್ಟ ದೃಶ್ಯ ಅಲ್ಲಿನ ವಾಸಿಗಳ ಕಣ್ಣಿಗೆ ಬಿದ್ದಿದೆ.

ದೊಡ್ಡದೊಂದು ಬಬಲ್ ಮಾಡಿಕೊಂಡು, ಅದರೊಳಗೆ ಸೇರಿಕೊಂಡು ಓಡಾಡುವ ಮೂಲಕ ತನ್ನನ್ನು ತಾನು ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ಯತ್ನಿಸುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ. ವಿಕ್ಟೋರಿಯಾ ಪ್ರಾಂತ್ಯದ ಬೆಲ್ಗ್ರೇವ್‌ ಎಂಬ ಊರಿನಲ್ಲಿ ಈ ದೃಶ್ಯಾವಳಿ ಕಂಡು ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...