alex Certify ಕೊರೊನಾ ವೈರಸ್​ ವಿರುದ್ಧ ಡಬಲ್​ ಮಾಸ್ಕ್ ಎಷ್ಟು ಸೇಫ್​…? ತಜ್ಞರು ಹೇಳೋದೇನು..? ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವೈರಸ್​ ವಿರುದ್ಧ ಡಬಲ್​ ಮಾಸ್ಕ್ ಎಷ್ಟು ಸೇಫ್​…? ತಜ್ಞರು ಹೇಳೋದೇನು..? ಇಲ್ಲಿದೆ ಡಿಟೇಲ್ಸ್

ಡಬಲ್ ರೂಪಾಂತರಿ ಹಾಗೂ ತ್ರಿಬಲ್​ ರೂಪಾಂತರಿ ಕೊರೊನಾ ವೈರಸ್​ಗಳಿಂದ ತಪ್ಪಿಸಿಕೊಳ್ಳೋದು ಹೇಗೆ ಅನ್ನೋದೇ ಒಂದು ದೊಡ್ಡ ಸವಾಲಾಗಿದೆ.‌ ಈ ಕೊರೊನಾದಿಂದ ಪಾರಾಗಲು ಎರಡೆರಡು ಮಾಸ್ಕ್​ಗಳನ್ನ ಧರಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಅಮೆರಿಕದ ಸೆಂಟರ್​​ ಡಿಸೀಸ್​ ಕಂಟ್ರೋಲ್​ನ ತಜ್ಞರು ಕೊರೊನಾದಿಂದ ಪಾರಾಗಲು ಡಬಲ್ ಮಾಸ್ಕ್​ಗಳನ್ನ ಧರಿಸೋದು ಹೆಚ್ಚು ಸೂಕ್ತ ಎಂದು ಹೇಳಿದ್ದಾರೆ.

ಮಾಸ್ಕ್​ನ ಪದರಗಳು ಹೆಚ್ಚಾಗೋದ್ರಿಂದ ವೈರಸ್​ ದೇಹಕ್ಕೆ ಪ್ರವೇಶಿಸುವ ಪ್ರಮಾಣ ಕಡಿಮೆಯಾಗುತ್ತೆ. ಅಧ್ಯಯನದ ಪ್ರಕಾರ ಡಬಲ್​ ಮಾಸ್ಕ್​​ನಿಂದ ಕೊರೊನಾ ಹರಡುವ ಪ್ರಮಾಣ 85 ರಿಂದ 95 ಪ್ರತಿಶತ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ವೈಜ್ಞಾನಿಕವಾಗಿ ಹೆಚ್ಚಿನ ಪದರಗಳುಳ್ಳ ಮಾಸ್ಕ್​ಗಳು ವೈರಾಣುಗಳಿಗೆ ಕಠಿಣ ಸವಾಲನ್ನ ನೀಡುತ್ತವೆ. ಸಾರ್ವಜನಿಕ ವಾಹನ, ಜನನಿಬಿಡ ಪ್ರದೇಶ, ಮಾರ್ಕೆಟ್​, ಆಸ್ಪತ್ರೆಗಳಂತಹ ಪ್ರದೇಶಗಳಲ್ಲಿ ಡಬಲ್​ ಮಾಸ್ಕ್​ಗಳನ್ನ ಧರಿಸೋದು ಹೆಚ್ಚು ಸೂಕ್ತ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ನೀವು ಕೂಡ ಈ ಮಾರ್ಗವನ್ನ ಬಳಸೋದಾದ್ರೆ ಮಾಸ್ಕ್​ಗಳನ್ನ ಸರಿಯಾದ ವಿಧಾನದಲ್ಲಿ ಹಾಕೋದನ್ನ ಮರೆಯದಿರಿ, ಡಬಲ್​ ಮಾಸ್ಕ್​ಗಳನ್ನ ಸರಿಯಾದ ರೀತಿಯಲ್ಲಿ ಹಾಕಿಕೊಂಡಲ್ಲಿ ನಿಜಕ್ಕೂ ಪರಿಣಾಮಕಾರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...