alex Certify ಕಣ್ಣಂಚಲ್ಲಿ ನೀರು ತರಿಸುತ್ತೆ ಈ ತಾಯಿಯ ನೋವಿನ ಕತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚಲ್ಲಿ ನೀರು ತರಿಸುತ್ತೆ ಈ ತಾಯಿಯ ನೋವಿನ ಕತೆ…!

ಮಗನೊಂದಿಗೆ ಶಾಪಿಂಗ್​ ಮಾಡುತ್ತಿದ್ದ ಮಹಿಳೆ ಬಳಿ ಬಂದ ಅಪರಿಚಿತ ಮಹಿಳೆ ಆ ಮಗುವಿಗೆ ಟೆಡ್ಡಿ ಬಿಯರ್​ ಗೊಂಬೆಯನ್ನ ಉಡುಗೊರೆಯಾಗಿ ನೀಡಿದ್ದಾರೆ.

ಆದರೆ ಈ ರೀತಿ ಮಗುವಿಗೆ ಗಿಫ್ಟ್ ನೀಡಿದ್ದಕ್ಕೆ ಕಾರಣ ಹೇಳಿದ ಅಪರಿಚಿತ ಮಹಿಳೆಯ ನೋವಿನ ಕತೆ ಕೇಳಿ ತಾಯಿಯ ಕಣ್ಣು ಒದ್ದೆಯಾಗಿದೆ.

ಚೆಲ್ಸಿಯಾ ರಾಬಿನ್ಸನ್​ ಭಾನುವಾರ ಮಧ್ಯಾಹ್ನ ಮ್ಯಾಂಚೆಸ್ಟರ್​ನಲ್ಲಿ ತನ್ನ 5 ವರ್ಷದ ಮಗ ಕಿಯಾನ್​ ಜೊತೆ ಶಾಪಿಂಗ್​ ಮಾಡುತ್ತಿದ್ದರು. ಈ ವೇಳೆ ಬಂದ ಅಪರಿಚಿತ ಮಹಿಳೆ ಕಿಯಾನ್​ಗೆ ಕ್ರಿಸ್​ಮಸ್​ ಹಬ್ಬದ ಉಡುಗೊರೆ ನೀಡಿದ್ದಾರೆ.

ಈ ಅಪರಿಚಿತ ಮಹಿಳೆ ತನ್ನ ಮಗುವನ್ನ ಕಳೆದುಕೊಂಡಿದ್ದು ತಮ್ಮ ಮಗುವಿನ ಸವಿ ನೆನಪಿಗಾಗಿ ಮಹಿಳೆ ಪ್ರತಿ ವರ್ಷ ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ಬೇರೆ ಮಕ್ಕಳಿಗೆ ಗಿಫ್ಟ್​ಗಳನ್ನ ನೀಡುತ್ತಾರಂತೆ.

ಆ ಅಪರಿಚಿತ ಮಹಿಳೆ ಪ್ರತಿ ವರ್ಷ ಈ ಸಮಯದಲ್ಲಿ 2 ಟೆಡ್ಡಿ ಬಿಯರ್​ಗಳನ್ನ ಖರೀದಿ ಮಾಡುತ್ತಾರಂತೆ. ಹಾಗೂ ಮ್ಯಾಂಚೆಸ್ಟರ್​ಗೆ ತೆರಳಿ ತನ್ನ ಮಗುವಿನ ವಯಸ್ಸಿನ ಆಸುಪಾಸಿನ ಮಕ್ಕಳಿಗೆ ಒಂದು ಗೊಂಬೆಯನ್ನ ಉಡುಗೊರೆಯಾಗಿ ನೀಡುತ್ತಾರೆ. ಹಾಗೂ ಇನ್ನೊಂದು ಗೊಂಬೆ ತನ್ನ ತನ್ನ ಮಗುವಿನ ಸವಿ ನೆನಪಿಗಾಗಿ ಇಟ್ಟುಕೊಳ್ತಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...