alex Certify ಜಗತ್ತಿನ ಅತ್ಯಂತ ಹಿರಿಯ ಶಾರ್ಕ್ ನ ವಯಸ್ಸೆಷ್ಟು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತ್ಯಂತ ಹಿರಿಯ ಶಾರ್ಕ್ ನ ವಯಸ್ಸೆಷ್ಟು ಗೊತ್ತಾ…..?

ಗಾಲಾಪಾಗೋಸ್ ದೈತ್ಯ ಆಮೆಯ ಸರಾಸರಿ ಜೀವಾವಧಿಯು 150-160 ವರ್ಷಗಳಷ್ಟು ಇರುತ್ತದೆ. ಕೋಯಿಮೀನುಗಳು 200 ವರ್ಷಗಳವರೆಗೂ ಬದುಕುತ್ತವೆ. ಕೆಲವೊಂದು ಬೋಹೆಡ್‌ ತಿಮಿಂಗಿಲಗಳು 200 ವರ್ಷಗಳ ಆಯುಷ್ಯ ಹೊಂದಿರುತ್ತವೆ.

ಗ್ರೀನ್‌ಲ್ಯಾಂಡ್‌ ಶಾರ್ಕ್ ಒಂದರ ಆಯಸ್ಸು ಬಹುತೇಕ 400 ವರ್ಷಗಳಷ್ಟು ಎಂದು ತಿಳಿದು ಬಂದಿದೆ. ಈ ತಿಮಿಂಗಿಲ ಜನಿಸಿದಾಗ ಅಮೆರಿಕ ಸಂಯುಕ್ತ ಸಂಸ್ಥಾನಗಳು ಇನ್ನೂ ಹುಟ್ಟಿರಲೇ ಇಲ್ಲ. 2016ರಲ್ಲಿ ಈ ಜೀವಿಯ ಸರಾಸರಿ ಆಯುಷ್ಯದ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಯಾವ ವರ್ಷದಲ್ಲಿ ಈ ಶಾರ್ಕ್ ಜನಿಸಿದೆ ಎಂದು ತಿಳಿದು ಬಂದಿಲ್ಲ.

ಈತ ಜಾರಿ ಬಿದ್ದ ರೀತಿಯನ್ನ ನೋಡಿ ನೆಟ್ಟಿಗರು ‌ʼಶಾಕ್ʼ

28 ಶಾರ್ಕ್‌ಗಳ ಗುಚ್ಛದಲ್ಲಿ ಅತ್ಯಂತ ಹಿರಿಯದಾದ ಹೆಣ್ಣು ಶಾರ್ಕ್ ಒಂದರ ಆಯುಷ್ಯವನ್ನು ರೇಡಿಯೋಕಾರ್ಬನ್ ಡೇಟಿಂಗ್ ಮೂಲಕ ಕಂಡುಹಿಡಿಯಲು ಸಂಶೋಧಕರು ಮುಂದಾದ ವೇಳೆ ಅದರ ಆಯುಷ್ಯ 392 ವರ್ಷವೆಂದು ತಿಳಿದು ಬಂದಿದೆ. ಆದರೆ ಅದರ ಆಯುಷ್ಯದ ವ್ಯಾಪ್ತಿಯು 272-512 ವರ್ಷಗಳ ನಡುವೆ ಇದೆ ಎಂದು ತಿಳಿದಿದ್ದು, ಸ್ಪಷ್ಟವಾಗಿ ತಿಮಿಂಗಿಲಕ್ಕೆ ಎಷ್ಟು ವರ್ಷವಾಗಿದೆ ಎಂದು ತಿಳಿದು ಬಂದಿಲ್ಲ.

ಹನಾಕೋ ಎಂಬ ಜಪಾನೀ ಮೀನೊಂದು 226 ವರ್ಷಗಳ ಕಾಲ ಬದುಕಿ 1977ರಲ್ಲಿ ಮೃತಪಟ್ಟಿತ್ತು. ಈ ಮೀನು 1751ರಲ್ಲಿ ಜನಿಸಿತ್ತು. ಹನಾಕೋನನ್ನು ಸಾಕಿದ್ದ ಕಡೆಯ ಮಾಲಕಿ ಡಾ. ಕೊಮೇರಿ ಕೊಶಿಹಾರಾ ಅದರ ಕಥೆಯನ್ನು 1966ರಲ್ಲಿ ಮೊದಲ ಬಾರಿಗೆ ನಿಪ್ಪಾನ್‌ ರೇಡಿಯೋ ಕೇಂದ್ರದಲ್ಲಿ ಹಂಚಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...