alex Certify ಈತ ಜಾರಿ ಬಿದ್ದ ರೀತಿಯನ್ನ ನೋಡಿ ನೆಟ್ಟಿಗರು ‌ʼಶಾಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈತ ಜಾರಿ ಬಿದ್ದ ರೀತಿಯನ್ನ ನೋಡಿ ನೆಟ್ಟಿಗರು ‌ʼಶಾಕ್ʼ

ಒದ್ದೆಯಾದ ನೆಲದ ಮೇಲೆ ನಡೆದಾಡುವಾಗ ಎಷ್ಟು ಹುಷಾರಾಗಿ ಇದ್ರುನೂ ಕಡಿಮೆಯೇ. ಆದರೆ ಎಷ್ಟೇ ಜಾಗರೂಕತೆ ವಹಿಸಿದ್ರೂ ಕೆಲವೊಮ್ಮೆ ಪರಿಸ್ಥಿತಿ ನಮ್ಮ ಕೈಲಿ ಇರೋದಿಲ್ಲ. ಅಂದಹಾಗೆ ನಾವು ಇದನ್ನೆಲ್ಲ ಹೇಳೋಕೆ ಕಾರಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆದ ಈ ವಿಡಿಯೋ.

ವಿಡಿಯೋದಲ್ಲಿ ಮಹಿಳೆಯೊಬ್ಬರು ಮುಂದೆ ನಡೆದುಕೊಂಡು ಹೋಗ್ತಿದ್ದಾರೆ. ಆಕೆಯ ಹಿಂದೆಯೇ ಒಬ್ಬ ವ್ಯಕ್ತಿ ನಡೆದುಕೊಂಡು ಹೋಗ್ತಿದ್ದಾನೆ. ನಡೆದುಕೊಂಡು ಬರ್ತಿದ್ದ ವೇಳೆ ಆತನ ಕೈಲಿದ್ದ ಪ್ಯಾಕೇಟ್​​ನಿಂದ ಹಾಲಿನ ರೀತಿಯ ದ್ರವ ಕೆಳಕ್ಕೆ ಬಿದ್ದಿದೆ.

ಅಚಾನಕ್​ ಆಗಿ ಆತ ಆ ದ್ರವದ ಮೇಲೆಯೇ ಕಾಲಿಟ್ಟಿದ್ದು ಜಾರಿ ಬಿದ್ದಿದ್ದಾನೆ. ಆತ ಬಿದ್ದ ರೀತಿಯನ್ನ ನೋಡ್ತಿದ್ರೆ ಆತನ ತಲೆಗೆ ಪೆಟ್ಟಾಗಿರಬಹುದು ಎಂದೆನಿಸುತ್ತಿದೆ. ಆದರೆ ವ್ಯಕ್ತಿ ಮಾತ್ರ ಪಟ್​ ಎಂದು ಎದ್ದು ನಿಂತಿದ್ದಾನೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋಗೆ ಟ್ವೀಟಿಗರು ತಮ್ಮದೇ ಆದ ರೀತಿಯಲ್ಲಿ ಶೀರ್ಷಿಕೆ ನೀಡುತ್ತಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...