alex Certify ಬಿರುಗಾಳಿಗೂ ಹೆದರದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿರುಗಾಳಿಗೂ ಹೆದರದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ..!

ಮದುವೆ ಮನೆಗೆ ಬರುವ ಮದುಮಗ ಹಾಗೂ ಮಧುಮಗಳು ಕಾರಿನಲ್ಲಿ ಬರೋದು ಕಾಮನ್ , ಆದರೆ ಫಿಲಿಫೈನ್ಸ್ ರಾಷ್ಟ್ರದ ಮೆಬಿನೇ ಎಂಬಲ್ಲಿ ನವಜೋಡಿ ಪ್ರವಾಹದ ನೀರಿನಲ್ಲಿ ನಡೆದುಕೊಂಡು ಚರ್ಚ್​ ತಲುಪಿದ್ದಾರೆ. ತಮ್ಮ ವಸ್ತ್ರಗಳನ್ನ ಹಿಡಿದುಕೊಂಡು ನದಿ ದಾಟ್ತಿರೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೆಬಿನೇ ಎಂಬಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗ್ತಿದೆ. ಕ್ವಿಂಟಾ ಟೈಫೋನ್​ನ ಹೊಡೆತದಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇಷ್ಟಾದ್ರೂ ಸಹ ಈ ಜೋಡಿ ತಮ್ಮ ಮದುವೆ ದಿನಾಂಕವನ್ನ ಮುಂದೂಡಿಲ್ಲ. ರಾನಿಲ್​​ ಗ್ವಿಲಿಪಾ ಹಾಗೂ ಜೆಸೀಲ್ ಮಸ್ವೇಲಾ ಮೊಣಕಾಲಿನವರೆಗೆ ತಮ್ಮ ಮದುವೆ ಡ್ರೆಸ್​ಗಳನ್ನ ಎತ್ತಿಕ್ಕೊಂಡು ನದಿ ದಾಟಿದ್ದಾರೆ.

ನವಜೋಡಿಯ ಸಂಬಂಧಿಕರೂ ಕೂಡ ಪ್ರವಾಹವನ್ನ ಲೆಕ್ಕಿಸದೇ ಮದುವೆಗೆ ಹಾಜರಾಗಿದ್ದಾರೆ. ಮಧುಮಗಳ ಸಂಬಂಧಿಯೊಬ್ಬರು ಈ ಫೋಟೋಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...