alex Certify ಸಂತೃಪ್ತ ವೈವಾಹಿಕ ಜೀವನ ನಡೆಸುವ ಪುರುಷರು ಒತ್ತಡ ನಿರ್ವಹಣೆಯಲ್ಲಿ ಉತ್ತಮರು: ಅಧ್ಯಯನದಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂತೃಪ್ತ ವೈವಾಹಿಕ ಜೀವನ ನಡೆಸುವ ಪುರುಷರು ಒತ್ತಡ ನಿರ್ವಹಣೆಯಲ್ಲಿ ಉತ್ತಮರು: ಅಧ್ಯಯನದಲ್ಲಿ ಬಹಿರಂಗ

ಮದುವೆಯಾದ ಪುರುಷರು ಮದುವೆಯಾಗದೇ ಇರುವ ಪುರುಷರಿಗಿಂತ ಕೆಲಸದ ಸ್ಥಳಗಳಲ್ಲಿ ಒತ್ತಡವನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂದು ವರದಿಯೊಂದು ತಿಳಿಸಿದೆ.

ವೈಯಕ್ತಿಕ ಸಂಬಂಧಗಳಲ್ಲಿ ತೃಪ್ತಿ ಹೊಂದಿರುವ ಮಂದಿಯಲ್ಲಿ ಕೆಲಸದ ಸ್ಥಳಗಳ ಪರಿಸ್ಥಿತಿಗಳನ್ನು ನಿಭಾಯಿಸುವ ಕ್ಷಮತೆ ಇನ್ನಷ್ಟು ಹೆಚ್ಚು ಎಂದು ರಷ್ಯಾದ ನ್ಯಾಷನಲ್ ರೀಸರ್ಚ್ ವಿವಿ ಹೈಯರ್‌ ಸ್ಕೂಲ್ ಆಫ್ ಎಕನಾಮಿಕ್ಸ್‌ ನಡೆಸಿದ ಅಧ್ಯಯನವೊಂದು ತಿಳಿಸಿದೆ.

ರಷ್ಯಾದ ವಿವಿಧ ಕಂಪನಿಗಳ 203 ಉದ್ಯೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ತಂತಮ್ಮ ವೈಯಕ್ತಿಕ ಸಂಬಂಧಗಳು ಹಾಗೂ ಕೆಲಸದ ಸ್ಥಳಗಳಲ್ಲಿ ಆಗುತ್ತಿರುವ ಅನುಭವಗಳ ಕುರಿತು ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಈ ಉದ್ಯೋಗಿಗಳಿಗೆ ತಿಳಿಸಲಾಗಿತ್ತು.

ಮೇಲ್ಕಂಡ ಅಂಶವು ಮದುವೆಯಾದ ಪುರುಷರಲ್ಲಿ ಇನ್ನೂ ಸ್ಪಷ್ಟವಾಗಿ ಗೋಚರವಾಗಿದೆ ಎಂದಿರುವ ಅಧ್ಯಯನ ವರದಿಯು, “ವೈವಾಹಿಕ ಸಂತೃಪ್ತಿ ಹಾಗೂ ಖಾಸಗಿ ಜೀವನದಲ್ಲಿ ಬೆಂಬಲ ಇರುವ ಭಾವವು ಒತ್ತಡಗಳ ನಿರ್ವಹಣೆ ವೇಳೆ ಪುರುಷರಿಗೆ ಬಹಳ ನೆರವಾಗುತ್ತದೆ,” ಎಂದು ಹೇಳುತ್ತದೆ.

ತಂದು ಹಾಕುವವರು ಹಾಗು ಕಾಪಾಡುವವರು ಎಂಬ ಹೊಣೆಗಾರಿಕೆಗಳನ್ನು ತಮ್ಮ ಹೆಗಲುಗಳ ಮೇಲೆ ಸಮಾಜವು ಇರಿಸಿರುವ ಕಾರಣದಿಂದಾಗಿ, ಪುರುಷರಿಗೆ ಕೌಟುಂಬಿಕ ತೃಪ್ತಿಗಳಿದ್ದಲ್ಲಿ ಅವರು ತಂತಮ್ಮ ವೃತ್ತಿಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿರಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

ಇದೇ ಮಹಿಳೆಯರ ವಿಷಯಕ್ಕೆ ಬಂದರೆ, ಸಾಕುವವರು ಹಾಗೂ ಸಲಹುವವರು ಎಂಬ ಹೊಣೆಗಾರಿಕೆಯ ನಿರೀಕ್ಷೆಗಳು ವಿಪರೀತವಾದರೆ ಅವರಲ್ಲೂ ಸಹ ಒತ್ತಡ ನಿರ್ವಹಣಾ ಸಾಮರ್ಥ್ಯ ಕುಗ್ಗುತ್ತದೆ ಎಂದು ಅಧ್ಯಯನ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...