alex Certify ʼಪ್ರಾಮಾಣಿಕತೆʼ ಇನ್ನೂ ಇದೆ ಎಂಬ ವಿಶ್ವಾಸ ಮೂಡಿಸುತ್ತೆ ಈ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪ್ರಾಮಾಣಿಕತೆʼ ಇನ್ನೂ ಇದೆ ಎಂಬ ವಿಶ್ವಾಸ ಮೂಡಿಸುತ್ತೆ ಈ ಘಟನೆ

ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೊಬೈಲ್​ನ್ನು ಕಳೆದುಕೊಂಡಿರಿ ಅಂದರೆ ಕತೆ ಮುಗೀತು ಅಂತಾನೇ ಅರ್ಥ. ಅದು ಪುನಃ ನಿಮ್ಮ ಕೈಗೆ ಸಿಗೋ ಮಾತೇ ಇಲ್ಲ. ಆದರೆ ಊಬರ್​ ಚಾಲಕನೊಬ್ಬ 8 ತಿಂಗಳ ಹಿಂದೆ ಗ್ರಾಹಕಿ ತನ್ನ ಕಾರಿನಲ್ಲಿ ಬಿಟ್ಟು ಹೋಗಿದ್ದ ಮೊಬೈಲ್​ನ್ನು ಸುರಕ್ಷಿತವಾಗಿ ಹಿಂದಿರುಗಿಸಿದ್ದಾನೆ.

ಲಂಡನ್​ ನಿವಾಸಿಯಾಗಿರುವ ಶೇ ಸೇಡ್​ ಎಂಬವರು ಈ ವಿಚಾರವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದು ನಂಬಿಕೆ ಮತ್ತು ಮಾನವೀಯತೆ ಜಗತ್ತಿನಲ್ಲಿ ಇನ್ನೂ ಇದೆ ಎಂದು ಶೀರ್ಷಿಕೆ ನೀಡಿದ್ದಾರೆ. ಆದರೆ ಈ ಮೊಬೈಲ್​ನ್ನು ಹಿಂದಿರುಗಿಸಲು 8 ತಿಂಗಳ ಸಮಯ ಏಕೆ ಬೇಕಾಯ್ತು ಎಂಬ ಪ್ರಶ್ನೆ ನಿಮ್ಮನ್ನ ಕಾಡುತ್ತಿರಬಹುದು.

ಈಕೆ ಏಪ್ರಿಲ್​ 30ರಂದು ಅಂದರೆ ಮೊಬೈಲ್​ ಕಳೆದುಹೋದ 8 ತಿಂಗಳ ಬಳಿಕ ಅದೇ ಕ್ಯಾಬ್​​ನ್ನು ಪುನಃ ಬುಕ್​ ಮಾಡಿದ್ದ ವೇಳೆ ಆ ಚಾಲಕ ಫೋನ್​ನ್ನು ಹಿಂದಿರುಗಿಸಿದ್ದಾನೆ.

ಕಳೆದ ವರ್ಷ ಆಗಸ್ಟ್ ತಿಂಗಳಿನಿಂದ ಈ ಮೊಬೈಲ್​ ಚಾಲಕನ ಬಳಿಯೇ ಇದ್ದಿತ್ತು. ಆದರೆ ಈ ಮಹಿಳೆಯನ್ನ ಹುಡುಕುವ ಯಾವುದೇ ಮಾರ್ಗ ಚಾಲಕನಿಗೆ ತಿಳಿದಿರಲಿಲ್ಲ. ಹೀಗಾಗಿ ಆಕೆ ಮತ್ತೊಮ್ಮೆ ಸಿಗುವವರೆಗೂ ಕಾಯೋಣ ಎಂದು ಚಾಲಕ ಆ ಮೊಬೈಲ್​ನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಎನ್ನಲಾಗಿದೆ.

ನನಗೆ ಜನರು ತುಂಬಾ ಒಳ್ಳೆಯವರು ಎಂದು ಎನಿಸಲು ಶುರುವಾಗಿದೆ. ಇಂತಹ ಒಳ್ಳೆಯ ಗುಣವುಳ್ಳ ಅಪರಿಚಿತನನ್ನ ನಾನು ನೋಡ್ತಿರೋದು ಇದೇ ಮೊದಲು. ಈತ ನಿಜಕ್ಕೂ ಒಳ್ಳೆಯ ಮನುಷ್ಯ ಎಂದು ಅವರು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...