alex Certify ಸ್ಕೈ ಡೈವಿಂಗ್ ಮಾಡಿದ 103 ವರ್ಷದ ವೃದ್ಧ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕೈ ಡೈವಿಂಗ್ ಮಾಡಿದ 103 ವರ್ಷದ ವೃದ್ಧ…!

Centenarian Daredevil': 103-Year-old US Man Sets World Record for Oldest Tandem Parachute Jump

ಟೆಕ್ಸಾಸ್‌ನ ಜಾರ್ಜ್‌ಟೌನ್‌ನ 103 ವರ್ಷದ ವ್ಯಕ್ತಿಯೊಬ್ಬರು ಡೇರ್ ‌ಡೆವಿಲ್ ಸ್ಟಂಟ್ ಒಂದನ್ನು ಮಾಡುವ ಮೂಲಕ ಗಿನ್ನೆಸ್ ವಿಶ್ವದಾಖಲೆಯ ಪುಸ್ತಕ ಸೇರಿದ್ದಾರೆ. ಪ್ಯಾರಾಚೂಟ್‌ ಒಂದರಿಂದ ಜಂಪ್ ಮಾಡಿದ ಅತ್ಯಂತ ಹಿರಿಯ ಪುರುಷ ಎಂಬ ಹೆಗ್ಗಳಿಕೆ ಇವರದ್ದು.

ಜನವರಿ 4, 1917ರಲ್ಲಿ ಜನಿಸಿದ ಆಲ್‌ಫರ್ಡ್ ಬ್ಲಾಕ್‌ಶೇಗೆ ಈಗ 103 ವರ್ಷ 181 ದಿನಗಳಷ್ಟು ವಯಸ್ಸಾಗಿದೆ. ‘Centenarian Daredevil’ ಎಂದು ಗಿನ್ನೆಸ್ ವಿಶ್ವದಾಖಲೆಯ ಪೇಜ್‌ನಲ್ಲಿ ಇವರನ್ನು ಕರೆಯಲಾಗಿದ್ದು, ಅವರ ಈ ಸಾಹಸದ ವಿಡಿಯೋ ಪೋಸ್ಟ್ ಮಾಡಲಾಗಿದೆ.

2017ರಲ್ಲಿ ತಮ್ಮ ಜನ್ಮಶತಮಾನದ ವರ್ಷದಲ್ಲಿ ಮೊದಲ ಬಾರಿಗೆ ಸ್ಕೈಡೈವ್‌ ಮಾಡಿದ್ದ ಆಲ್‌ಫರ್ಡ್, ತಮ್ಮ ಮೊಮ್ಮಕ್ಕಳು ಕಾಲೇಜಿನಿಂದ ಪದವಿ ಪಡೆದ ಬಳಿಕ ಇನ್ನೊಮ್ಮೆ ಸ್ಕೈ ಡೈವಿಂಗ್ ಮಾಡುವುದಾಗಿ ತಿಳಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...