alex Certify ಮಗು ಜೀವ ಉಳಿಯಲು ಕಾರಣವಾಯ್ತು ತಂದೆ ಸಮಯಪ್ರಜ್ಞೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗು ಜೀವ ಉಳಿಯಲು ಕಾರಣವಾಯ್ತು ತಂದೆ ಸಮಯಪ್ರಜ್ಞೆ

ಇದೊಂದು ಭಯಾನಕ ಘಟನೆ. ತಂದೆಯೊಬ್ಬ ಮೃತ್ಯುಕೂಪದಿಂದ ತನ್ನ ಮಗುವನ್ನು ಕೂದಲೆಳೆ ಅಂತರದಲ್ಲಿ ಪಾರುಮಾಡಿದ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಬಡಿತ ಹೆಚ್ಚಿಸಿದೆ.

ಏಪ್ರಿಲ್ 14ರಂದು ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಈ ಘಟನೆ ಸಂಭವಿಸಿದ್ದು, ತಂದೆ – ಮಗ ಇಬ್ಬರೂ ರಸ್ತೆ ಪಕ್ಕದ ಪಾದಚಾರಿ ಮಾರ್ಗದಲ್ಲಿ ನಿಂತಿದ್ದ ವೇಳೆ ಕಾರೊಂದು ರಿವರ್ಸ್ ಗೇರ್ ನಲ್ಲಿ ಹಿಮ್ಮುಖವಾಗಿ ಅವರತ್ತ ನುಗ್ಗಿ ಬಂದಿದೆ.

ಕಾರು ತಮ್ಮತ್ತ ಬರುವುದನ್ನು ಕಂಡ ತಂದೆಯು ನಾಲ್ಕು ವರ್ಷದ ಮಗುವನ್ನು ಕ್ಷಣಮಾತ್ರದಲ್ಲಿ ಎಳೆದುಕೊಂಡು ಕಾರಿನ ಡಿಕ್ಕಿಯಿಂದ ಆಗುತ್ತಿದ್ದ ಅಪಾಯದಿಂದ ಮಗುವನ್ನು ರಕ್ಷಿಸಿದ್ದು, ನೆರೆಯ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಆ ಘಟನೆ ಸೆರೆಯಾಗಿದೆ.

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಐಚ್ಛಿಕ ವಿಷಯವಾಗಿ NCC

ಚಾಲಕನ ನಿಯಂತ್ರಣ ಕಳೆದುಕೊಂಡಂತೆ ಕಾರು ಕಾಣಿಸುತ್ತಿದ್ದು, ಇತರ ಕಾರುಗಳ ಘರ್ಷಣೆಯನ್ನು ತಪ್ಪಿಸಲು ಚಾಲಕ ಪ್ರಯತ್ನಿಸುತ್ತಾನೆ. ಆದರೆ ಕಾರು ಪುಟ್ ಪಾತ್ ಮೇಲೆ ಹಾದು ಬರುತ್ತದೆ.

ಅಂಗಡಿ ಮುಂದೆ ತನ್ನ ಮಗುವಿನೊಂದಿಗೆ ನಿಂತಿದ್ದ ತಂದೆ ಆ ಕ್ಷಣದಲ್ಲಿ ಅಪಘಾತದ ಮುನ್ಸೂಚನೆ ಅರಿತು ಅಲ್ಲಿಂದ ಮಗುವನ್ನು ಎಳೆದುಕೊಂಡು ದಾಟಿ ಬಿಡುವ ಸಂದರ್ಭ ವಿಡಿಯೋದಲ್ಲಿ ಕಾಣಿಸುತ್ತದೆ.

ಈ ವಿಡಿಯೊ ಯೂಟ್ಯೂಬ್‌ನಲ್ಲಿ ಸಾವಿರಾರು ಬಾರಿ ವೀಕ್ಷಣೆಯಾಗಿದೆ, ಅನೇಕರು ಆ ತಂದೆಯ ಪ್ರಸೆನ್ಸ್ ಆಫ್ ಮೈಂಡ್ ಹೊಗಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...