alex Certify ತಂದೆಗೆ ಸ್ಕೇಟ್‌ ‌ಬೋರ್ಡ್‌ ಹೇಳಿಕೊಟ್ಟ ಪುಟ್ಟ ಪೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಗೆ ಸ್ಕೇಟ್‌ ‌ಬೋರ್ಡ್‌ ಹೇಳಿಕೊಟ್ಟ ಪುಟ್ಟ ಪೋರಿ

ತಂದೆ – ಮಗಳ ಸಂಬಂಧದ ಬಗ್ಗೆ ನಿತ್ಯ ನೂರಾರು ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತೇವೆ. ಆದರೆ ಇದೀಗ ವಿಭಿನ್ನವಾಗಿರುವ ವಿಡಿಯೋದಲ್ಲಿ ಪುಟ್ಟ ಪೋರಿಯೇ ತನ್ನ ತಂದೆಗೆ ಸ್ಕೇಟಿಂಗ್‌ ಹೇಳಿಕೊಡುತ್ತಿದ್ದಾಳೆ.

ಹೌದು, ಎಚ್‌.ಎನ್.‌ ಬ್ರೇನ್ನನ್‌ ಹಾಕಿರುವ ವಿಡಿಯೋದಲ್ಲಿ ಪೆಟ್ರಾ ಲೆನ್ನಾಕ್ಸ್‌ ಎನ್ನುವ ಪುಟ್ಟ ಬಾಲಕಿ ತನ್ನ ತಂದೆಗೆ ಸ್ಕೇಟಿಂಗ್‌ ಮಾಡುವುದನ್ನು ಕಲಿಸುತ್ತಿದ್ದಾಳೆ. ಈ ಬಗ್ಗೆ ವಿಡಿಯೋ ಹಾಕಿದ್ದು, ಇದು ಪೂರ್ವ ನಿರ್ಧರಿತ ಮಾಡಿರುವ ವಿಡಿಯೋವಲ್ಲ. ಮಗಳು ತಾನಾಗಿಯೇ ತನ್ನ ತಂದೆಗೆ ಸ್ಕೇಟಿಂಗ್‌ ಪಾಠ ಮಾಡುತ್ತಿರುವ ವಿಡಿಯೋ ಎಂದು ಹೇಳಲಾಗಿದೆ.

1.41 ನಿಮಿಷದ ಈ ವಿಡಿಯೋದಲ್ಲಿ ಮಗಳು ತಂದೆಗೆ ಸ್ಕೇಟಿಂಗ್‌ ಹತ್ತುವುದರಿಂದ ಹಿಡಿದು ಹೇಗೆ ಹೋಗಬೇಕು ಎನ್ನುವ ತನಕ ಕಲಿಸಿದ್ದಾಳೆ. ವಿಡಿಯೋದಲ್ಲಿ ಮಗಳು ತಂದೆಯ ಹಿಂದೆಯೇ ಹೋಗುತ್ತಿದ್ದು, ಹುಷಾರಾಗಿರುವಂತೆ ಸೂಚನೆ ನೀಡುತ್ತಿದ್ದಾಳೆ. ಇದೀಗ ಈ ವಿಡಿಯೋ ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿದ್ದು, ಪುಟ್ಟ ಪೋರಿ ತನ್ನ ತಂದೆಗೆ ಸಹಾಯ ಮಾಡುತ್ತಿರುವ ಬಗ್ಗೆ ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

https://www.instagram.com/tv/CEqKMJepsAw/?utm_source=ig_embed

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...