alex Certify ಲೈವ್‌ ಟೆಲಿಕಾಸ್ಟ್‌ ವೇಳೆ ವರದಿಗಾರನ ಮೂಗಿಗೆ ಕುಕ್ಕಿದ ಪಕ್ಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈವ್‌ ಟೆಲಿಕಾಸ್ಟ್‌ ವೇಳೆ ವರದಿಗಾರನ ಮೂಗಿಗೆ ಕುಕ್ಕಿದ ಪಕ್ಷಿ

ತಮ್ಮ ಪುಂಡಾಟಕ್ಕೆ ಹೆಸರುವಾಸಿಯಾಗಿರುವ ಮ್ಯಾಗ್ಪೀ ಪಕ್ಷಿಗಳು ಬಲೇ ತುಂಟ ಬುದ್ಧಿಯವು.

ಆಸ್ಟ್ರೇಲಿಯಾದ 9ನ್ಯೂಸ್ ವರದಿಗಾರರೊಬ್ಬರು ಲೈವ್‌ ಟೆಲಿಕಾಸ್ಟ್‌ ಸಂದರ್ಭದಲ್ಲಿ ಮಾತನಾಡುತ್ತಿದ್ದ ವೇಳೆ ಅವರಿಗೆ ಬಂದು ಕುಕ್ಕಿದ ಮ್ಯಾಗ್ಪೀ ಒಂದು ಸಾಮಾಜಿಕ ಜಾಲತಾಣದಲ್ಲಿ ಹವಾ ಮೇಂಟೇನ್ ಮಾಡುತ್ತಿದೆ.

ಸುದ್ದಿ ವಾಹಿನಿಯ ಮೆಲ್ಬರ್ನ್ ವರದಿಗಾರ ಬ್ರೆಟ್‌ ಮ್ಯಾಕ್‌ಲಿಯೋಡ್‌ ಸಂಸತ್‌ ಭವನದ ಮುಂದಿನಿಂದ ನೇರ ಪ್ರಸಾರವೊಂದರಲ್ಲಿ ಮಾತನಾಡಲು ಸಿದ್ಧರಾಗುತ್ತಿದ್ದು, ನಗರದಲ್ಲಿ ಕೋವಿಡ್-19 ಸಂಬಂಧದ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವ ಕುರಿತಂತೆ ಅವರು ಮಾತನಾಡುವವರಿದ್ದರು.

ಅಷ್ಟರಲ್ಲೇ ದಿಢೀರ್‌ ಪ್ರತ್ಯಕ್ಷವಾದ ಈ ಮ್ಯಾಗ್ಪೀ ಮ್ಯಾಕ್‌ಲಿಯೋಡ್‌ ಮೂಗಿಗೆ ಕುಕ್ಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...