alex Certify BIG NEWS: ಶೀಘ್ರವೇ ಬರಲಿದೆ ಬ್ಯಾಟರಿ ಚಾಲಿತ ʼಕೃತಕ ಹೃದಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶೀಘ್ರವೇ ಬರಲಿದೆ ಬ್ಯಾಟರಿ ಚಾಲಿತ ʼಕೃತಕ ಹೃದಯʼ

ಲಿಥಿಯಮ್ ಐಯಾನ್ ಬ್ಯಾಟರಿಯಿಂದ ಕೆಲಸ ಮಾಡುವ ಜಗತ್ತಿನ ಅತ್ಯಂತ ಸುಧಾರಿತವಾದ ಕೃತಕ ಹೃದಯವನ್ನು ಅಭಿವೃದ್ಧಿಪಡಿಸಿರುವುದಾಗಿ ಫ್ರೆಂಚ್ ಕಂಪನಿಯೊಂದು ಹೇಳಿಕೊಂಡಿದೆ.

ಈ ಉತ್ಪನ್ನವನ್ನು 2021ರ ದ್ವಿತೀಯ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡುವುದಾಗಿ ಅದರ ನಿರ್ಮಾತೃ ’ಕಾರ್ಮಟ್‌’ ಹೇಳಿಕೊಂಡಿದೆ. ದೊಡ್ಡ ಮಟ್ಟದಲ್ಲಿ ಹೃದಯ ವೈಫಲ್ಯದಿಂದ ಬಳಲುತ್ತಿರುವ ಮಂದಿಗೆ ರಿಲೀಫ್ ಕೊಡಲು ಈ ಕಂಪನಿ ಚಿಂತನೆ ನಡೆಸಿದೆ. ’ಏಸನ್’ ಹೆಸರಿನ ಈ ಕೃತಕ ಹೃದಯವನ್ನು ತಾನು 25 ವರ್ಷಗಳಿಂದ ಅಭಿವೃದ್ಧಿಪಡಿಸುತ್ತಿರುವುದಾಗಿ ಹೇಳಿಕೊಂಡಿದೆ.

ಹೀಗೊಂದು ’ಖಾರ’ವಾದ ಗಿನ್ನೆಸ್ ದಾಖಲೆ….!

ಕೃತಕ ಹೃದಯದ ಮೇಲಿನ ಸಂಶೋಧನೆಯು 85 ವರ್ಷಗಳಿಂದಲೂ ನಡೆಯುತ್ತಿದೆ. 1937ರಲ್ಲಿ ನಾಯಿಯೊಂದಕ್ಕೆ ಕೃತಕ ಹೃದಯವನ್ನು ಹಾಕಲಾಗಿತ್ತು. 1967ರಲ್ಲಿ ಮೊದಲ ಬಾರಿಗೆ ಮಾನವನಿಗೆ ಕೃತಕ ಹೃದಯವನ್ನು ಅಳವಡಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...