alex Certify ಸಾವಿನ ಅಪಾಯವನ್ನು ಹಲವು ಪಟ್ಟು ಹೆಚ್ಚಿಸುತ್ತೆ ಪ್ರತಿದಿನದ ಈ ಅಭ್ಯಾಸ; ಇದು ಮದ್ಯಕ್ಕಿಂತಲೂ ಹೆಚ್ಚು ಅಪಾಯಕಾರಿ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನ ಅಪಾಯವನ್ನು ಹಲವು ಪಟ್ಟು ಹೆಚ್ಚಿಸುತ್ತೆ ಪ್ರತಿದಿನದ ಈ ಅಭ್ಯಾಸ; ಇದು ಮದ್ಯಕ್ಕಿಂತಲೂ ಹೆಚ್ಚು ಅಪಾಯಕಾರಿ !

ದೈಹಿಕ ಚಟುವಟಿಕೆಗಳು ಕಡಿಮೆಯಾದಷ್ಟೂ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಇದು ನಮ್ಮ ಆಯಸ್ಸನ್ನು ಕಡಿಮೆ ಮಾಡುವಂತಹ ದುರಭ್ಯಾಸ. ಅಷ್ಟೇ ಅಲ್ಲ ದೈಹಿಕ ನಿಷ್ಕ್ರಿಯತೆ ಬುದ್ಧಿಮಾಂದ್ಯತೆ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ದೀರ್ಘಕಾಲ ಕುಳಿತುಕೊಳ್ಳುವುದು: ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿಯಿಂದ ಅನೇಕ ರೀತಿಯ ರೋಗಗಳು ಹರಡುತ್ತಿವೆ. ಹೃದಯದ ಆರೋಗ್ಯವು ಹೆಚ್ಚಿನ ಅಪಾಯದಲ್ಲಿದೆ. ಇಂತಹ ಅನೇಕ ಅಭ್ಯಾಸಗಳು ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕ. ಅವುಗಳಲ್ಲೊಂದು ಅಭ್ಯಾಸವೆಂದರೆ ದೀರ್ಘಕಾಲ ಕುಳಿತುಕೊಳ್ಳುವುದು. ಇದು ಮದ್ಯ ಸೇವನೆಯಂತೆಯೇ ಬಹಳ ಅಪಾಯಕಾರಿ ಎನ್ನುತ್ತಾರೆ ವಿಜ್ಞಾನಿಗಳು. ವಾಹನ ಚಾಲಕರು, ಕಂಡಕ್ಟರ್‌ಗಳು ಅಥವಾ ಗಾರ್ಡ್‌ಗಳು ಕರ್ತವ್ಯದ ಸಮಯದಲ್ಲಿ ಕುಳಿತೇ ಇರುತ್ತಾರೆ. ದೀರ್ಘಕಾಲ ಕುಳಿತುಕೊಳ್ಳುವುದರಿಂದ ಹೃದ್ರೋಗದ ಅಪಾಯವು ದ್ವಿಗುಣವಾಗುತ್ತದೆ.

ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಏಕೆ ಅಪಾಯಕಾರಿ ?

ಕಚೇರಿಯಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದು, ಮನೆಯಲ್ಲಿ ಹೆಚ್ಚಿನ ಸಮಯ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುವುದು ಅಥವಾ ವಾಹನ ಚಲಾಯಿಸುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಹಾನಿ ಉಂಟಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ದೈಹಿಕ ಚಟುವಟಿಕೆಗಳು ಕಡಿಮೆಯಾದಷ್ಟೂ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ.

ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದಾಗುವ ಅನಾನುಕೂಲಗಳು

ಸಾವಿನ ಅಪಾಯ

ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದಾಗಿ ಅಕಾಲಿಕ ಮರಣದ  ಅಪಾಯವಿದೆ. ಹೆಚ್ಚು ಹೊತ್ತು ಕುಳಿತು ವ್ಯಾಯಾಮ ಮಾಡಿದರೂ ಅದರ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಈ ಅಭ್ಯಾಸವು ಹೃದಯದ ತೊಂದರೆಗಳು, ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ನಮ್ಮ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.

ಬುದ್ಧಿಮಾಂದ್ಯತೆಯ ಅಪಾಯ

ಹೆಚ್ಚು ಹೊತ್ತು ಕುಳಿತುಕೊಳ್ಳುವವರಿಗೆ ಮಾನಸಿಕ ಸಮಸ್ಯೆಗಳು ಮತ್ತು ಬುದ್ಧಿಮಾಂದ್ಯತೆಯ ಅಪಾಯ ಹೆಚ್ಚು. ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಹೃದ್ರೋಗ, ಮಧುಮೇಹ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಬರಬಹುದು. ಇದು ಬುದ್ಧಿಮಾಂದ್ಯತೆಗೆ ಮುಖ್ಯ ಕಾರಣವಾಗಿದೆ. ಆದ್ದರಿಂದ ಕೆಲಸದ ನಡುವೆ ಆಗಾಗ ಎದ್ದು ವಾಕ್‌ ಮಾಡಬೇಕು.

ಬೊಜ್ಜು ಮತ್ತು ಹೃದಯಾಘಾತ

ಹೆಚ್ಚಿನ ಸಮಯ ಕುಳಿತುಕೊಳ್ಳುವುದು, ಟಿವಿ ನೋಡುವುದು, ಕೆಲಸ ಮಾಡುವುದರಲ್ಲೇ ಕಳೆಯುತ್ತಿದ್ದರೆ ಅತಿಯಾದ ಬೊಜ್ಜು ಬರಬಹುದು, ತೂಕ ಹೆಚ್ಚಾಗಬಹುದು. ಇದು ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಕಡಿಮೆ ಕ್ಯಾಲೊರಿಗಳನ್ನು ಸುಡುವುದಲ್ಲದೆ, ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಗೆ ಕಾರಣವಾಗುವ ಇನ್ಸುಲಿನ್‌ಗೆ ದೇಹವು ಪ್ರತಿಕ್ರಿಯಿಸುವ ವಿಧಾನವನ್ನು ಬದಲಾಯಿಸುತ್ತದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...