alex Certify ಹೀಗೊಂದು ’ಖಾರ’ವಾದ ಗಿನ್ನೆಸ್ ದಾಖಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೊಂದು ’ಖಾರ’ವಾದ ಗಿನ್ನೆಸ್ ದಾಖಲೆ….!

Man Sets World Record for Eating World's Hottest Chillies, Immediately Regrets it. Here's Why

ನೀವು ಖಾರ ಪ್ರಿಯರಾಗಿದ್ದಲ್ಲಿ ನಿಮ್ಮ ಅಣ್ಣತಮ್ಮನೊಬ್ಬ ಇಲ್ಲಿದ್ದಾನೆ ನೋಡಿ.

ಜಗತ್ತಿನ ಅತ್ಯಂತ ಖಾರವಾದ ಮೆಣಸಿನಕಾಯಿಯನ್ನು ಬೇಗ ತಿಂದು ಮುಗಿಸಿದ ಕೆನಡಾದ ವ್ಯಕ್ತಿಯೊಬ್ಬ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾನೆ.

ಮೂರು ಕರೋಲಿನಾ ರೀಪರ್‌ ಚಿಲ್ಲಿ ಮೆಣಸಿನಕಾಯಿಗಳನ್ನು ಕೇವಲ 9.72 ಸೆಕೆಂಡ್‌ಗಳಲ್ಲಿ ತಿಂದು ಮುಗಿಸಿದ್ದಾನೆ ಈ ಹಾಟ್‌ ಗಯ್‌.

ಚಿನ್ನದ ನಾಲಗೆ ಹೊಂದಿದ್ದ 2000 ವರ್ಷದ ಹಿಂದಿನ ʼಮಮ್ಮಿʼ ಪತ್ತೆ

ಮೈಕ್ ಜಾಕ್ ಹೆಸರಿನ ಈ ವ್ಯಕ್ತಿ ಈ ಮೆಣಸಿನಕಾಯಿಗಳನ್ನು ತಿನ್ನುತ್ತಿರುವ ವಿಡಿಯೋವನ್ನು ಗಿನ್ನೆಸ್ ವಿಶ್ವದಾಖಲೆ ತನ್ನ ಫೇಸ್ಬುಕ್ ಪೇಜ್‌ನಲ್ಲಿ ಶೇರ್‌ ಮಾಡಿಕೊಂಡಿದೆ.

ನವೆಂಬರ್‌ 21, 2020ರಲ್ಲಿ ಈ ದಾಖಲೆ ಮಾಡಲಾಗಿದ್ದು, ಬುಧವಾರ ಇದರ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ಕೋವಿಡ್‌-19 ಲಾಕ್‌ಡೌನ್ ಅವಧಿಯಲ್ಲಿ ಮಡದಿ ಜೇಮಿ ಜಾಕ್‌ರನ್ನು ಸಾಕ್ಷಿಯಾಗಿ ಇಟ್ಟುಕೊಂಡು, ಆಕೆಗೆ ಟೈಂ ರೆಕಾರ್ಡ್ ಮಾಡಲು ಹೇಳಿದ ಜಾಕ್‌, ಬಲೇ ಕಷ್ಟಪಟ್ಟು ಈ ಮೆಣಸಿನಕಾಯಿಗಳನ್ನು ತಿಂದು ಮುಗಿಸುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

Carolina Reaper Chili Challenge – Guinness World Records

The red-hot Carolina Reaper is the world's hottest chili pepper – Canada's Mike Jack just claimed a record for the fastest time to eat three ?️?️?️?

Posted by Guinness World Records on Wednesday, January 27, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...