alex Certify ಭರವಸೆ ಹುಟ್ಟಿಸುತ್ತೆ ʼಕೊರೊನಾ ಗೆದ್ದ ಈ ವೃದ್ದರ ಕಥೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರವಸೆ ಹುಟ್ಟಿಸುತ್ತೆ ʼಕೊರೊನಾ ಗೆದ್ದ ಈ ವೃದ್ದರ ಕಥೆ….!

ವಿಶ್ವಕ್ಕೆ ವ್ಯಾಪಿಸಿರೋ ಕೊರೊನಾ ವೈರಸ್ ಎಲ್ಲರಿಗಿಂತ ಹೆಚ್ಚಾಗಿ ವೃದ್ಧರ ಪಾಲಿಗೆ ಜೀವ ಕಂಟಕವಾಗಿ ನಿಂತಿದೆ. ಈಗಾಗಲೇ ವಿಶ್ವದ ಅನೇಕ ವೃದ್ಧರು ಕೊರೊನಾ ವೈರಸ್​ನಿಂದಾಗಿ ಪ್ರಾಣ ಬಿಟ್ಟಿದ್ದಾರೆ. ಹಾಗಂತ ಕೊರೊನಾ ಬಂದ ವೃದ್ಧರು ಬದುಕಿ ಉಳಿದೇ ಇಲ್ಲ ಅನ್ನೋ ಹಾಗೂ ಇಲ್ಲ. ಎಷ್ಟೋ ಮಂದಿ ವೃದ್ಧರು ಕೋವಿಡ್ ​ನಂತಹ ಡೆಡ್ಲಿ ವೈರಸ್​​ನ್ನೇ ಗೆದ್ದುಕೊಂಡು ಬಂದಿದ್ದಾರೆ.

ಈ ಮಾತಿಗೆ ಉದಾಹರಣೆ ಎಂಬಂತೆ ಬರೋಬ್ಬರಿ 103 ವರ್ಷದ ವೃದ್ಧೆಯೊಬ್ಬರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಕೊರೊನಾದಿಂದ ಗೆದ್ದು ಬಂದ ಜೆನ್ನಿ ಸ್ಟೆನ್ಜಾ ಬಿಯರ್​ ಪಾರ್ಟಿ ಮೂಲಕ ಖುಷಿ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ.

ಎರಡನೆಯ ಮಹಾಯುದ್ದದಿಂದ ಹಿಡಿದು ಈಗಿನ ಕೊರೊನಾ ವೈರಸ್​ ಸಂಕಷ್ಟವನ್ನ 104 ವರ್ಷದ ಲ್ಯಾಪ್​ಚೀಸ್​ ಎಂಬವರು ಕಂಡಿದ್ದಾರೆ. ಮಾರ್ಚ್​ 10ನೇ ತಾರೀಖಿನಂದು ವೃದ್ಧ ಲ್ಯಾಪ್​ಚೀಸ್​ಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಲ್ಯಾಪ್​ಚೀಸ್​ ಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. ಯುದ್ಧದ ಅನುಭವಿ 104 ವರ್ಷದ ವೃದ್ಧ ಕೊರೊನಾದಿಂದ ಮುಕ್ತರಾಗಿ ಬಂದ ಬಳಿಕ ಕೇಕ್​ ಕಟ್​ ಮಾಡಿ ಸಂಭ್ರಮಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...