alex Certify ಇದ್ದಕ್ಕಿದ್ದಂತೆ ಅಲುಗಾಡಿದ ಗಗನಚುಂಬಿ ಕಟ್ಟಡ..! ದಿಕ್ಕಾಪಾಲಾಗಿ ಓಡಿದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದ್ದಕ್ಕಿದ್ದಂತೆ ಅಲುಗಾಡಿದ ಗಗನಚುಂಬಿ ಕಟ್ಟಡ..! ದಿಕ್ಕಾಪಾಲಾಗಿ ಓಡಿದ ಜನ

ಚೀನಾದ ಶೇನ್ಜೆನ್​​ ನಗರದಲ್ಲಿ ಗಗನ ಚುಂಬಿ ಕಟ್ಟಡವೊಂದು ಇದ್ದಕ್ಕಿದ್ದ ಹಾಗೆ ಅಲುಗಾಡಿದ್ದು ಎಲ್ಲರೂ ಶಾಕ್​ ಆಗಿದ್ದಾರೆ. ಬರೋಬ್ಬರಿ 356 ಮೀಟರ್​ ಎತ್ತರವಿರುವ ಎಸ್​ಇಜಿ ಪ್ಲಾಜಾ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ರೀತಿ ಅಲುಗಾಡಿದೆ.

ಕಟ್ಟಡ ಅಲುಗಾಡಲು ಆರಂಭಿಸುತ್ತಿದ್ದಂತೆಯೇ ಗಗನಚುಂಬಿ ಕಟ್ಟಡದ ಬಳಿಯಿದ್ದವರೆಲ್ಲ ಓಡಿ ಹೋಗಿದ್ದಾರೆ. ಭಯಗೊಂಡಿದ್ದ ಕಟ್ಟಡದ ಒಳಗಿದ್ದ ವ್ಯಾಪಾರಸ್ಥರನ್ನೂ ಸ್ಥಳಾಂತರಿಸಲಾಗಿದೆ.

ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಮಧ್ಯಾಹ್ನ 2.30ರ ಸುಮಾರಿಗೆ ಕಟ್ಟಡವನ್ನ ಬಂದ್​ ಮಾಡಲಾಗಿದೆ. ಈ ಗಗನಚುಂಬಿ ಕಟ್ಟಡವು ಈ ರೀತಿ ಅಲುಗಾಡಲು ಕಾರಣವೇನು ಅನ್ನೋದರ ಬಗ್ಗೆ ತನಿಖೆ ನಡೆಯುತ್ತಿದೆ.

ಮಗನಿಗೆ ಬದನೆಕಾಯಿ ಗೊಜ್ಜು ತಿನಿಸಿದ ಪಕ್ಕದ ಮನೆಯಾಕೆಯ ಮೇಲೆ ಉರಿದುಬಿದ್ದ ತಾಯಿ

ಈ ರೀತಿ ಕಟ್ಟಡವು ಅಲುಗಾಡಲು ಆರಂಭಿಸುತ್ತಿದ್ದಂತೆಯೇ ಈ ಭಾಗದಲ್ಲಿ ಭೂಕಂಪ ಸಂಭವಿಸಿದೆಯಾ ಎಂದು ಮೊದಲು ಪರೀಕ್ಷೆ ಮಾಡಲಾಯ್ತು. ಆದರೆ ಶೆನ್ಜೆನ್​ ನಗರದಲ್ಲಿ ಯಾವುದೇ ಭೂಕಂಪ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೀಗ ವಿವಿಧ ಇಲಾಖೆ ಅಧಿಕಾರಿಗಳು ಕಟ್ಟಡ ಅಲುಗಾಡಲು ಕಾರಣವೇನು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಸರಿಸುಮಾರು 12 ದಶಲಕ್ಷ ಜನರನ್ನ ಹೊಂದಿರುವ ಈ ನಗರದ ಹೃದಯಭಾಗದಲ್ಲಿರುವ ಕಟ್ಟಡವನ್ನ ಅಧಿಕಾರಿಗಳು ಹೇಗೆ ದುರಂತ ಉಂಟಾಗೋದ್ರಿಂದ ಪಾರು ಮಾಡ್ತಾರೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಕಟ್ಟಡ ಅಲುಗಾಡುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

— Shenzhen Pages (@ShenzhenPages) May 18, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...