alex Certify ಪುಟ್ಟ ಪೋರನ ಜೊತೆ ಇರುವುದೇನು ಅಂತ ತಿಳಿದ್ರೆ ಬೆಚ್ಚಿಬೀಳ್ತೀರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಪೋರನ ಜೊತೆ ಇರುವುದೇನು ಅಂತ ತಿಳಿದ್ರೆ ಬೆಚ್ಚಿಬೀಳ್ತೀರಿ…!

ಎರಡು ವರ್ಷದ ಈ ಪೋರನಿಗೆ ತನ್ನ ಬೆಸ್ಟ್ ಫ್ರೆಂಡ್‌ ಅನ್ನು ಬಿಟ್ಟು ಇರಲಾಗದು. ಬೇಸ್‌ಮೆಂಟ್ ಒಂದರ ಬಳಿ ಬೆನ್ನಿಯನ್ನು ಕಂಡ ಥಿಯೋ ಸದಾ ಆತನ ಜೊತೆಗೇ ಇರುತ್ತಾನೆ.

ಅಂದ ಹಾಗೆ ಬೆನ್ನಿ ಐದು ಅಡಿಯ ಸ್ಕೆಲಿಟನ್. ಥಿಯೋಗೆ ಈ ಸ್ಕೆಲಿಟನ್‌ ಎಂದರೆ ಅದೆಷ್ಟು ಇಷ್ಟವೆಂದರೆ, ಆತನ ಅಮ್ಮ ಅಬಿಗೈಲ್‌ ಗೆ ತನ್ನ ಮಗನ ಜೊತೆಗೆ ಈ ಅಸ್ಥಿಪಂಜರವನ್ನು ಕೊಂಡೊಯ್ಯುವುದೇ ಒಂದು ದೊಡ್ಡ ಕೆಲಸವಾಗಿಬಿಟ್ಟಿದೆ.

ಪ್ರವಾಹದ ಕಾರಣ ಮನೆಯ ಬೇಸ್‌ಮೆಂಟ್‌ಗೆ ಹರಿದುಬಂದ ನೀರಿನೊಂದಿಗೆ ಈ ಅಸ್ಥಿಪಂಜರವೂ ಬಂದಿತ್ತು. ಬೇಸ್‌ಮೆಂಟ್ ಕ್ಲೀನ್ ಮಾಡುವ ಸಂದರ್ಭದಲ್ಲಿ ಕಂಡ ಈ ಅಸ್ಥಿಯನ್ನು ಮೇಲಕ್ಕೆ ತೆಗೆದುಕೊಂಡು ಹೋಗಲು ಥಿಯೋ ಅಮ್ಮನಿಗೆ ಕೇಳಿಕೊಂಡಿದ್ದಾನೆ. ಹೇಗಿದ್ದರೂ ಹ್ಯಾಲೋವೀನ್‌ಗೆ ಕೆಲ ದಿನಗಳ ಮುಂಚೆಯೇ ಸಿಂಗಾರ ಮಾಡಿದರಾಯಿತು ಎಂದು ಅಗಿಬೈಲ್ ಅದನ್ನು ಮನೆಗೆ ಎತ್ತಿಕೊಂಡು ಹೋಗಿದ್ದಾರೆ. ಈ ಅಸ್ಥಿಯನ್ನು ಬಹಳ ಹಚ್ಚಿಕೊಂಡಿರುವ ಥಿಯೋ ಹೋದಲ್ಲಿ ಬಂದಲ್ಲೆಲ್ಲಾ ಅದು ತನ್ನ ಜೊತೆಗೇ ಇರಬೇಕೆಂದು ಆಶಿಸುತ್ತಿದ್ದಾನೆ.

https://www.instagram.com/p/CFM5kBVhRiV/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...