alex Certify 17ನೇ ಶತಮಾನದ ಕಲಾಕೃತಿಯ ಮೂಲ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

17ನೇ ಶತಮಾನದ ಕಲಾಕೃತಿಯ ಮೂಲ ಪತ್ತೆ

ಬೆಲ್ಜಿಯಂ ರಾಜಧಾನಿ ಬ್ರುಸೆಲ್​ನ ಪುರಸಭೆ ಕಟ್ಟಡದಲ್ಲಿ ದಶಕಗಳ ಕಾಲ ತೂಗು ಹಾಕಲಾಗಿದ್ದ ಕಲಾಕೃತಿ, ವರ್ಣಚಿತ್ರಕಾರ ಫ್ಲೆಮಿಶ್​ ಮಾಸ್ಟರ್​ ಜಾಕೋಬ್​ ಜೋರ್ಡಾನ್ಸ್​​ಗೆ ಸೇರಿದ್ದು ಅಂತಾ ಬೆಲ್ಜಿಯಂ ಸಂರಕ್ಷಣಾಧಿಕಾರಿಗಳು ದೃಢೀಕರಿಸಿದ್ದಾರೆ.

ಇದು 17ನೇ ಶತಮಾನದ ಆರಂಭದಲ್ಲಿ ಚಿತ್ರಿಸಿದ ಜೋರ್ಡಾನ್ಸ್​​ ಬರೆದ ದಿ ಹೋಲಿ ಫ್ಯಾಮಿಲಿಯ ಅತ್ಯಂತ ಹಳೆಯ ಆವೃತ್ತಿಯೆಂದು ತಜ್ಞರು ನಿರ್ಧರಿಸಿದ್ದಾರೆ.

ಸೇಂಟ್​ ಗಿಲ್ಲೆಸ್​ನ ಬ್ರುಸೆಲ್ಸ್​ನ ಸಾಂಸ್ಕೃತಿಕ ಆಸ್ತಿಯ ದಾಸ್ತಾನು ವಿಭಾಗದ ಅಂತಾರಾಷ್ಟ್ರೀಯ ತಜ್ಞರ ಸಹಾಯದಿಂದ ರಾಯಲ್​​ ಇನ್​ಸ್ಟಿಟ್ಯೂಟ್​ ಫಾರ್​ ಕಲ್ಚರಲ್​ ಹೆರಿಟೇಜ್​ ಈ ನಂಬಲಾಗದ ಆವಿಷ್ಕಾರವನ್ನ ಮಾಡಿದೆ.

1960 ದಶಕದಿಂದಲೂ ಸೇಂಟ್​ ಗಿಲ್ಲೆಸ್​ ಮುನ್ಸಿಪಲ್​ ಹಾಲ್​ನಲ್ಲಿರುವ ಕಚೇರಿಯಲ್ಲಿ ಈ ಚಿತ್ರಕಲೆ ಇರಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...