alex Certify ನಡೆದುಕೊಂಡು ಹೋಗುವಾಗ ಮೊಬೈಲ್ ಬಳಸಿದರೆ ಜೈಲು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡೆದುಕೊಂಡು ಹೋಗುವಾಗ ಮೊಬೈಲ್ ಬಳಸಿದರೆ ಜೈಲು..!

ಇಂದಿನ ಕಾಲದಲ್ಲಿ ಮೊಬೈಲ್ ಇಲ್ಲದೆ ಇರೋವ್ರು ಯಾರೂ ಇಲ್ಲ ಅನ್ನಿಸುತ್ತೆ. ಪುಟ್ಟ ಮಗು ಕೂಡ ಮೊಬೈಲ್ ನೋಡಿ ನಗುವುದು, ಅಳುವುದನ್ನು ನೋಡಿದ್ದೇವೆ. ಅಷ್ಟೆ ಯಾಕೆ ಒಂದು ಹೊತ್ತು ಊಟ ಬೇಕಾದರೂ ಬಿಡಬಹುದೇನೋ ಆದರೆ ಮೊಬೈಲ್ ಮಾತ್ರ ಬಿಡುವುದಿಲ್ಲ. ಅಷ್ಟರ ಮಟ್ಟಿಗೆ ನಾವೆಲ್ಲಾ ಮೊಬೈಲ್‌ಗೆ ಹೊಂದಿಕೊಂಡಿದ್ದೇವೆ. ಇನ್ನು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗಲೂ ಮೊಬೈಲ್ ಬೇಕೇ ಬೇಕು.

ಆದರೆ ಇನ್ಮುಂದೆ ಹಾಗಾಗಲ್ಲ. ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದರೆ ಮೊಬೈಲ್ ಬಳಸುವಂತಿಲ್ಲ. ಹಾಗೇನಾದರೂ ಬಳಸಿದರೆ ಜೈಲು ಗ್ಯಾರಂಟಿ. ರಸ್ತೆಯಲ್ಲಿ ನಡೆಯುವಾಗ ಮೊಬೈಲ್ ಬಳಸುವುದರಿಂದ ಅಪಘಾತಗಳು, ಅವಘಡಗಳು ನಡೆಯುತ್ತಿವೆ ಎಂಬ ಕಾರಣಕ್ಕೆ ರಸ್ತೆಯಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸಲು ಚಿಂತಿಸಲಾಗುತ್ತಿದೆ.

ಹೌದು, ಜಪಾನ್ ದೇಶ ಇಂತಹದೊಂದು ಕಾನೂನು ತರಲು ಮುಂದಾಗುತ್ತಿದೆ. ಈ ದೇಶದ ಕನಗಾವಾ ಪ್ರಾಂತ್ಯದ ನಗರದಲ್ಲಿ ಈ ಕಾನೂನು ಜಾರಿಯಾಗುತ್ತಿದೆ. ಈ ಕಾನೂನು ಜಾರಿಗೂ ಮುನ್ನ ಇಲ್ಲಿನ ಸ್ಥಳೀಯ ಮಾಧ್ಯಮವೊಂದು ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಶೇ.12ರಷ್ಟು ಮಂದಿ ನಡೆದುಕೊಂಡು ಹೋಗುವಾಗ ಮೊಬೈಲ್ ಬಳಸುತ್ತಾರೆಂದು ಹೇಳಿದೆ. ಹೀಗಾಗಿ ಈ ಕಾನೂನು ತರಲು ಮುಂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...