alex Certify ವೆಬ್​ಸಿರೀಸ್​ನಿಂದ ಪ್ರೇರಣೆ: 12 ಲಕ್ಷ ರೂ.ಗೆ ಬೇಡಿಕೆಯಿಟ್ಟು ಪ್ರಾಣ ಬೆದರಿಕೆ ಒಡ್ಡಿದ ಯುವಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೆಬ್​ಸಿರೀಸ್​ನಿಂದ ಪ್ರೇರಣೆ: 12 ಲಕ್ಷ ರೂ.ಗೆ ಬೇಡಿಕೆಯಿಟ್ಟು ಪ್ರಾಣ ಬೆದರಿಕೆ ಒಡ್ಡಿದ ಯುವಕ….!

ಕ್ರೈಂ ವೆಬ್​ಸಿರೀಸ್​ನಿಂದ ಪ್ರೇರಣೆ ಪಡೆದ 18 ವರ್ಷದ ಯುವಕನೊಬ್ಬ ಗುರುಗ್ರಾಮ ಮೂಲದ ಕಂಪೆನಿಯೊಂದರ ಮಾನವ ಸಂಪನ್ಮೂಲ ಮುಖ್ಯಸ್ಥರಿಗೆ ಬೆದರಿಕೆ ಹಾಕಿ 12 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನು ಬಂಧಿಸಲಾಗಿದೆ.

ಮುಖ್ಯಸ್ಥರನ್ನು ಕೊಲ್ಲಲು ತನಗೆ 26 ಲಕ್ಷ ರೂಪಾಯಿ ಒಪ್ಪಂದ ಬಂದಿದೆ ಎಂದು ಕರೆ ಮಾಡಿ ಯುವಕ ತಿಳಿಸಿದ್ದಾನೆ. 12 ಲಕ್ಷ ರೂಪಾಯಿ ನೀಡದೇ ಹೋದರೆ ಅವರನ್ನು ಮತ್ತು ಅವರ ಕುಟುಂಬವನ್ನು ಅಪಹರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಫೋನ್​ ಕರೆ ಆಧರಿಸಿ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ತನ್ನ ತಾಯಿ ಕ್ಯಾನ್ಸರ್ ರೋಗಿಯಾಗಿದ್ದು, ಕುಟುಂಬ 7 ಲಕ್ಷ ರೂಪಾಯಿ ಸಾಲದಲ್ಲಿದೆ. ಅದ್ದರಿಂದ ವೆಬ್​ ಸಿರೀಸ್ ನೋಡಿ ಈ ಐಡಿಯಾ ಮಾಡಿದೆ ಎಂದಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...