alex Certify BIG NEWS: ಮುಂಬೈನಲ್ಲಿ ಕೊರೊನಾ ವೈರಸ್​ XE ರೂಪಾಂತರದ ಮೊದಲ ಪ್ರಕರಣ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುಂಬೈನಲ್ಲಿ ಕೊರೊನಾ ವೈರಸ್​ XE ರೂಪಾಂತರದ ಮೊದಲ ಪ್ರಕರಣ ಪತ್ತೆ

ದೇಶದಲ್ಲಿ ಮೊದಲ ಕೊರೊನಾ ವೈರಸ್​​ ಎಕ್ಸ್​​ಇ ರೂಪಾಂತರ ಪ್ರಕರಣವು ಮುಂಬೈನಲ್ಲಿ ವರದಿಯಾಗಿದೆ ಎಂದು ಬೃಹನ್​ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​​ ಮಾಧ್ಯಮ ಪ್ರಕಟಣೆ ಮೂಲಕ ಅಧಿಕೃತ ಮಾಹಿತಿ ನೀಡಿದೆ. ಇದರ ಜೊತೆಯಲ್ಲಿ ಕಪ್ಪಾ ರೂಪಾಂತರದ ಪ್ರಕರಣ ಕೂಡ ವರದಿಯಾಗಿದೆ. ಹೊಸ ರೂಪಾಂತರಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಯಾವುದೇ ಗಂಭೀರ ಲಕ್ಷಣಗಳು ಗೋಚರವಾಗಿಲ್ಲ ಎಂದು ಬಿಎಂಸಿ ಹೇಳಿದೆ.

ಕೋವಿಡ್​ 19ನ ಈ ಹೊಸ ರೂಪಾಂತರವು ಈ ಹಿಂದಿನ ಯಾವುದೇ ರೂಪಾಂತರಿಗಿಂತ ಹೆಚ್ಚು ವೇಗವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳೆದ ವಾರ ಮಾಹಿತಿ ನೀಡಿತ್ತು.

ಈ ವರ್ಷದ ಆರಂಭದಲ್ಲಿ ಬ್ರಿಟನ್​ನಲ್ಲಿ ಕೊರೊನಾ ವೈರಸ್​ನ ಈ ಹೊಸ ತಳಿ ಪತ್ತೆಯಾಗಿದೆ. ಬ್ರಿಟನ್​ನ ಆರೋಗ್ಯ ಸಂಸ್ಥೆ ಏಪ್ರಿಲ್​ 3ರಂದು ತಾವು ಜನವರಿ 19ರಂದು ಎಕ್ಸ್​ಇ ಮೊದಲ ಪ್ರಕರಣವನ್ನು ಪತ್ತೆ ಹಚ್ಚಿದ್ದೇವೆ ಎಂದು ಹೇಳಿದೆ. ಬ್ರಿಟನ್​ನಲ್ಲಿ ಈವರೆಗೆ 637 ಮಂದಿ ಕೊರೊನಾ ಎಕ್ಸ್​ಇ ರೂಪಾಂತರದ ಸೋಂಕನ್ನು ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...