alex Certify ಗಡಿಯಾಚೆ ಮೊಳಗಿದ ಸಿಧು ಮೂಸೆವಾಲಾ ಹಾಡು; ಹೆಜ್ಜೆ ಹಾಕಿದ ಭಾರತೀಯ ಯೋಧರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಡಿಯಾಚೆ ಮೊಳಗಿದ ಸಿಧು ಮೂಸೆವಾಲಾ ಹಾಡು; ಹೆಜ್ಜೆ ಹಾಕಿದ ಭಾರತೀಯ ಯೋಧರು

ಪಂಜಾಬಿ ಗಾಯಕ ಸಿಧು ಮೂಸೆವಾಲಾ ನಿಧನರಾಗಿರಬಹುದು ಆದರೆ ಅವರ ಹಾಡುಗಳು ಇನ್ನೂ ಮಾಸಿಲ್ಲ, ಜೀವಂತವಾಗಿದೆ. ಹತ್ಯೇಗಿಡಾದ ಆ ಗಾಯಕನಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಕ್ಕಿವೆ.

ಈಗ ಭಾರತೀಯ ಸೇನೆಯ ಸಿಬ್ಬಂದಿ ಅವರ ಒಂದು ಹಾಡು, ಬಂಬಿಹಾ ಬೋಲೆಗೆ ಸ್ಟೆಪ್​ ಹಾಕುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಶೇಷವೇನೆಂದರೆ ಗಡಿಯಾಚೆಗಿನ ಸೈನಿಕರು ಹಾಡಿನ ಟ್ರಾಕ್​ ಪ್ಲೇ ಮಾಡಿದ್ದಾರೆ.

ವಿಡಿಯೋವನ್ನು ಭಾರತೀಯ ಪೊಲೀಸ್​ ಸೇವಾ ಅಧಿಕಾರಿ ಎಚ್​ಜಿಎಸ್​ ಧಲಿವಾಲ್​ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಪಾಕಿಸ್ತಾನಿ ಸೈನಿಕರು ಮೂಸೆವಾಲಾ ಅವರ ಬಂಬಿಹಾ ಬೋಲೆಯನ್ನು ಸ್ಪೀಕರ್​ಗಳಲ್ಲಿ ಹಾಕಿಕೊಂಡಿರುವುದು ಕಂಡುಬಂದಿದೆ. ಇತ್ತ ಭಾರತೀಯ ಸೇನೆಯ ಸಿಬ್ಬಂದಿ ಪೆಪ್ಪಿ ಹಾಡನ್ನು ಆನಂದಿಸಿ ಮತ್ತು ಅದಕ್ಕೆ ಡ್ಯಾನ್ಸ್​ ಮಾಡಿದ್ದಾರೆ. ಗಡಿಯ ಔಟ್​ ಪೋಸ್ಟ್​ನಲ್ಲಿದ್ದ ಸಿಬ್ಬಂದಿಯ ಮೊಬೈಲ್‌ನಲ್ಲಿ ಈ ವಿಡಿಯೋ ರೆಕಾರ್ಡ್​ ಮಾಡಲಾಗಿದೆ.

ಸಿಧುವಿನ ಹಾಡುಗಳು ಗಡಿಯುದ್ದಕ್ಕೂ ಪ್ಲೇ ಆಗುತ್ತಿವೆ ! ವಿಭಜನೆಯನ್ನು ಸೇತುವೆ ಮಾಡುತ್ತಿದೆ” ಎಂದು ಪೋಸ್ಟ್​ ಅನ್ನು ಹಂಚಿಕೊಳ್ಳುವಾಗ ಧಲಿವಾಲ್​ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಆಗುತ್ತಿದ್ದಂತೆ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ನೆಟ್ಟಿಗರು ಕಾಮೆಂಟ್​ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ.

“ಇದು ತುಂಬಾ ಭಾವನಾತ್ಮಕವಾಗಿದೆ. ಗಡಿಯಾಚೆಗಿನ ಜನರು ಸಹ ಸಿಧು ನಷ್ಟದ ನೋವನ್ನು ಅನುಭವಿಸಿದರು. ಆ ಗಾಯಕ ಈಗ ಶಾಂತಿಯಿಂದಿರಲಿ” ಎಂದು ಒಬ್ಬರು ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...