alex Certify ತ್ಯಾಜ್ಯ ಮಾರಾಟ ಮಾಡಿ ರೈಲ್ವೆ ಇಲಾಖೆ ಗಳಿಸಿದೆ 391 ಕೋಟಿ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ಯಾಜ್ಯ ಮಾರಾಟ ಮಾಡಿ ರೈಲ್ವೆ ಇಲಾಖೆ ಗಳಿಸಿದೆ 391 ಕೋಟಿ ರೂ.

ಕೊರೊನಾ ಹಿನ್ನಲೆಯಲ್ಲಿ ಭಾರತದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸೆಂಟ್ರಲ್ ರೈಲ್ವೆ ಈ ಅವಧಿಯಲ್ಲಿ ಅದ್ಭುತ ಕೆಲಸ ಮಾಡಿ, ಸಾಕಷ್ಟು ಹಣ ಗಳಿಸಿದೆ. ಸೆಂಟ್ರಲ್ ರೈಲ್ವೆ, ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ, 2020-21ರಲ್ಲಿ, ಸೆಂಟ್ರಲ್ ರೈಲ್ವೆ ತ್ಯಾಜ್ಯದಿಂದ 391 ಕೋಟಿ ರೂಪಾಯಿ ಗಳಿಸಿದೆ.

ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ತ್ಯಾಜ್ಯವನ್ನು ಮಾರಾಟ ಮಾಡುವ ಮೂಲಕ, ಕೇಂದ್ರ ರೈಲ್ವೆ 391 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಆದಾಯ ಗಳಿಸಿದೆ. ಈ ಮೂಲಕ ರೈಲ್ವೆ ಆವರಣವನ್ನು ಸ್ವಚ್ಛಗೊಳಿಸಿದೆ.

ಸೆಂಟ್ರಲ್ ರೈಲ್ವೇ ಶೂನ್ಯ ಸ್ಕ್ರ್ಯಾಪ್ ಮಿಷನ್ ಆರಂಭಿಸಿದೆ. ಇದರ ಅಡಿಯಲ್ಲಿ ಕೇಂದ್ರ ರೈಲ್ವೆಯ ಪ್ರತಿಯೊಂದು ವಿಭಾಗ, ಕಾರ್ಖಾನೆ ಮತ್ತು ಶೆಡ್ ಗಳನ್ನು ಸ್ವಚ್ಛವಾಗಿಡಲಾಗ್ತಿದೆ. ಕೇಂದ್ರ ರೈಲ್ವೆಗೆ ಬೇಡದ ವಸ್ತುಗಳನ್ನು ಇ-ಹರಾಜಿನ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಇದ್ರಿಂದ ರೈಲ್ವೆ ಇಲಾಖೆ  8.65 ಕೋಟಿ ರೂಪಾಯಿ ಆದಾಯ ಗಳಿಸಿದೆ.

ಮಾಹಿತಿ ಪ್ರಕಾರ, 2020-21 ರಲ್ಲಿ ಕೇಂದ್ರ ರೈಲ್ವೆ, ತ್ಯಾಜ್ಯದ ಮೂಲಕ ಗಳಿಸಿದ ಮೊತ್ತ, ಕಳೆದ 15 ವರ್ಷಗಳಲ್ಲಿ ಅತಿ ಹೆಚ್ಚು. ಲಾಕ್‌ಡೌನ್ ಸಮಯದಲ್ಲಿ ಪ್ಯಾಸೆಂಜರ್ ರೈಲು ಓಡಾಡದ ಕಾರಣ  ರೈಲ್ವೆ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ಇದು ಸಹಾಯ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...