alex Certify ಬದಲಾದ ಅದೃಷ್ಟ…! ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬದಲಾದ ಅದೃಷ್ಟ…! ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ವ್ಯಕ್ತಿ

ಕೆಲವರು ರಾತ್ರಿ ಬೆಳಗಾಗೋದ್ರಲ್ಲಿ ಶ್ರೀಮಂತರಾಗ್ತಾರೆ. ಇದಕ್ಕೆ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಈಗ ಇನ್ನೊಬ್ಬ ವ್ಯಕ್ತಿ ಇದಕ್ಕೆ ನಿದರ್ಶನ.

ಕಂಪನಿಯೊಂದರ ಕಂಟ್ರೋಲ್ ರೂಂನಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಶ್ರೀಜು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಕೇರಳ ಮೂಲದ 39 ವರ್ಷದ ಶ್ರೀಜು, ಕಳೆದ 11 ವರ್ಷಗಳಿಂದ ಫುಜೈರಾದಲ್ಲಿ ವಾಸಿಸುತ್ತಿದ್ದಾರೆ. ಫುಜೈರಾ ದುಬೈನಿಂದ 110 ಕಿಲೋಮೀಟರ್ ದೂರದಲ್ಲಿದೆ. ಲಾಟರಿ ಟಿಕೆಟ್‌ ಶ್ರೀಜು ಜೀವನವನ್ನು ಬದಲಿಸಿದೆ.

ಸ್ಯಾಟರ್ಡೇ ಮಿಲಿಯನ್ ಎಂಬ ಲಾಟರಿ ಖರೀದಿ ಮಾಡಿದ್ದ ಶ್ರೀಜುಗೆ 45 ಕೋಟಿ ರೂಪಾಯಿ ಮೌಲ್ಯದ ಲಾಟರಿ ಹೊಡೆದಿದೆ. ಕಾರು ಹತ್ತಬೇಕು ಎನ್ನುವ ಸಮಯದಲ್ಲಿ ಶ್ರೀಜು ಖಾತೆಗೆ ಹಣ ಬಂದಿದ್ದನ್ನು ನೋಡಿದ್ದಾರೆ. ಆದ್ರೆ ಅಧಿಕೃತ ಮಾಹಿತಿ ಬರಲಿ ಎಂದು ಕಾದಿದ್ದಾರೆ. ಲಾಟರಿ ಗೆದ್ದ ಕರೆ ಬರ್ತಿದ್ದಂತೆ ಶ್ರೀಜುವನ್ನು ಹಿಡಿಯೋರು ಯಾರು ಇರಲಿಲ್ಲ. ಒಂದಲ್ಲ ಎರಡಲ್ಲ 45 ಕೋಟಿ ರೂಪಾಯಿ ಲಾಟರಿ ಹೊಡೆದಿದ್ದು ಶ್ರೀಜು ಜೀವನದಲ್ಲಿ ಅತ್ಯಂತ ದೊಡ್ಡ ಬದಲಾವಣೆಯಾಗಿದೆ.

ಹಣ ಇಲ್ಲ ಎನ್ನುವ ಕಾರಣಕ್ಕೆ ಶ್ರೀಜು ಮನೆ ಖರೀದಿ ಮಾಡಿರಲಿಲ್ಲ. ಈಗ ಇಷ್ಟೊಂದು ಹಣ ಕೈನಲ್ಲಿರುವ ಕಾರಣ ಭಾರತದಲ್ಲಿ ಒಂದು ಮನೆ ಖರೀದಿ ಮಾಡೋದು ನನ್ನ ಮೊದಲ ಗುರಿ ಎಂದು ಶ್ರೀಜು ಹೇಳಿದ್ದಾರೆ.

ಯುಎಇಯಲ್ಲಿರುವ ಅನೇಕ ಭಾರತೀಯರು ಅಲ್ಲಿನ ಲಾಟರಿ ಖರೀದಿ ಮಾಡೋದು ಮಾಮೂಲಿ. ಅನೇಕ ಮಧ್ಯಮ ವರ್ಗದ ಹಾಗೂ ಬಡ ವರ್ಗದ ಭಾರತೀಯರು ಲಾಟರಿಗೆ ಹಣ ಖರ್ಚು ಮಾಡ್ತಾರೆ. ಈಗ ಬಿಡುಗಡೆಯಾಗಿರುವ ಲಾಟರಿಯಲ್ಲಿ ಶ್ರೀಜು ಹೊರತುಪಡಿಸಿ ಇನ್ನೊಬ್ಬ ಭಾರತೀಯ  ರಾಫೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೇರಳ ಮೂಲದ  ಶರತ್ ಶಿವದಾಸನ್ ಅವರಿಗೆ 11 ಲಕ್ಷ ರೂಪಾಯಿ ಸಿಕ್ಕಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...