alex Certify ಟಿ-20 ವಿಶ್ವಕಪ್ : ಪಂದ್ಯಕ್ಕೂ ಮುನ್ನ ಚರ್ಚೆಗೆ ಕಾರಣವಾಗಿದೆ ಕೊಹ್ಲಿ ಟ್ವೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ-20 ವಿಶ್ವಕಪ್ : ಪಂದ್ಯಕ್ಕೂ ಮುನ್ನ ಚರ್ಚೆಗೆ ಕಾರಣವಾಗಿದೆ ಕೊಹ್ಲಿ ಟ್ವೀಟ್

ಟಿ-20 ವಿಶ್ವಕಪ್ ನಲ್ಲಿ ಭಾರತ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯ ವಿಶ್ವಕಪ್ ನ ಫೈನಲ್ ಪಂದ್ಯ ಎನ್ನಲಾಗ್ತಿದೆ. ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳೇ ಈ ಪಂದ್ಯ ವೀಕ್ಷಣೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಪಂದ್ಯಕ್ಕೂ ಮೊದಲೇ ಅನೇಕ ದಿಗ್ಗಜರು, ಇದ್ರ ಬಗ್ಗೆ ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಚರ್ಚೆಗೆ ಕಾರಣವಾಗಿದೆ.

NPS ಯೋಜನೆ: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪಂದ್ಯಕ್ಕೆ ಸಂಬಂಧಿಸಿದಂತೆ ಒಂದು ಟ್ವೀಟ್ ಮಾಡಿದ್ದಾರೆ. ಕೊಹ್ಲಿ ಟ್ವೀಟ್, ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ ಭಾರತದ ಕೆಲ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಕೊಹ್ಲಿ ತಮ್ಮ ಬ್ರಾಂಡ್ ವ್ರೊಗ್ ಪ್ರಮೋಷನ್ ಗಾಗಿ ಒಂದು ಟ್ವೀಟ್ ಮಾಡಿದ್ದಾರೆ. ಭಾನುವಾರ ದೊಡ್ಡ ಪಂದ್ಯವಿದೆ. ನೀವು ನರ್ವಸ್ ಆಗಿದ್ದೀರಾ? ನನ್ನ ಉತ್ತರ  ವ್ರೊಗ್ ಎಂದು ಹೇಳಿದ್ದಾರೆ. ಪಂದ್ಯಕ್ಕಿಂತ ಮೊದಲು ಕಮೆಂಟ್ ಮಾಡುವ ಮೊದಲು ಪ್ರಾಕ್ಟೀಸ್ ಮಾಡಿ ಎಂದು ಅನೇಕ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ಪಂದ್ಯಕ್ಕೆ ಮೊದಲು ಪ್ರಾಕ್ಟೀಸ್ ಮಾಡುವ ಬದಲು ಕೊಹ್ಲಿ, ಜಾಹೀರಾತಿನಲ್ಲಿ ಬ್ಯುಸಿಯಾಗಿದ್ದಾರೆಂದು ಕೆಲವರು ಕೋಪ ವ್ಯಕ್ತಪಡಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...