alex Certify ಹಲ್ಲಿನಲ್ಲೇ ಖಾಸಗಿ ಅಂಗ ಕತ್ತರಿಸಿದವನು ಅಂದರ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಲಿನಲ್ಲೇ ಖಾಸಗಿ ಅಂಗ ಕತ್ತರಿಸಿದವನು ಅಂದರ್….!

ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ವಿಚಿತ್ರ ಘಟನೆ ನಡೆದಿದ. ಯುವಕನೊಬ್ಬ ಇನ್ನೊಬ್ಬ ವ್ಯಕ್ತಿಯ ಖಾಸಗಿ ಭಾಗವನ್ನು ಹಲ್ಲಿನಿಂದ ಕತ್ತರಿಸಿದ್ದಾನೆ. ಇಬ್ಬರ ಮಧ್ಯೆ ಜಗಳ ನಡೆದಿತ್ತು. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷ್ಯವಾಗಿದೆ.

ಈ ಘಟನೆ ತ್ರಿಶೂರ್ ಜಿಲ್ಲೆಯ ಕುನ್ನತೂರು ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 28 ವರ್ಷದ ಷರೀಫ್ 55 ವರ್ಷದ ಸುಲೈಮಾನ್ ಮೇಲೆ ಹಲ್ಲೆ ನಡೆಸಿ, ಖಾಸಗಿ ಭಾಗವನ್ನು ಹಲ್ಲಿನಲ್ಲಿ ಕಚ್ಚಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಸುಲೇಮಾನ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಲೈಮಾನ್ ಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಖಾಸಗಿ ಭಾಗವನ್ನು ಮತ್ತೆ ಜೋಡಿಸಲಾಗಿದೆ. ಸುಲೇಮಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ದಂಗಾಗಿಸುತ್ತೆ ಈ ಜಾನುವಾರು ಖರೀದಿಗೊಳಗಾದ ಬೆಲೆ…!

ಖಾಸಗಿ ಭಾಗವನ್ನು ಕತ್ತರಿಸಿದ ಆರೋಪ ಹೊತ್ತಿರುವ ಷರೀಫ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಷರೀಫ್ ಪೆರುಂಬದಪ್ಪು ನಿವಾಸಿ. ಸುಲೇಮಾನ್ ಪುನ್ನುಕಾವ್ ನಿವಾಸಿ. ಇಬ್ಬರು ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಘಟನೆ ವೇಳೆ ಉಪಸ್ಥಿತರಿದ್ದ ಜನರು ಷರೀಫ್ ನನ್ನು ತಡೆಯುವ ಯತ್ನ ಮಾಡಿದ್ದಾರೆ. ಆದ್ರೆ ಷರೀಫ್ ಕೋಪ ಮಿತಿಮೀರಿತ್ತು ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...