alex Certify ಸ್ಟ್ರೆಚರ್​ ಸಿಗದ ಕಾರಣ ʼಕೊರೊನಾʼ ಸೋಂಕಿತನನ್ನ ಬೈಕ್​ನಲ್ಲೇ ಕರೆದೊಯ್ದ ಕುಟುಂಬಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟ್ರೆಚರ್​ ಸಿಗದ ಕಾರಣ ʼಕೊರೊನಾʼ ಸೋಂಕಿತನನ್ನ ಬೈಕ್​ನಲ್ಲೇ ಕರೆದೊಯ್ದ ಕುಟುಂಬಸ್ಥರು

ಕೊರೊನಾ ಎರಡನೇ ಅಲೆಯ ಭೀಕರತೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ವೈದ್ಯಕೀಯ ಸೌಲಭ್ಯದ ಕೊರತೆಯಿಂದಾಗಿ ಜನರು ಕಂಗಾಲಾಗಿ ಹೋಗಿದ್ದಾರೆ.

ಅನೇಕರು ಆಕ್ಸಿಜನ್​ ಸಿಲಿಂಡರ್​ಗಾಗಿ ಹುಡುಕಾಟ ನಡೆಸಿದ್ರೆ ಇನ್ನೂ ಹಲವರು ಆಸ್ಪತ್ರೆ ಬೆಡ್​ಗಾಗಿ ಪರದಾಡುತ್ತಿದ್ದಾರೆ. ಈ ನಡುವೆ ಔಷಧಿಗಳ ಕೊರತೆ ಕೂಡ ಭಾರೀ ಆಘಾತವನ್ನ ತಂದೊಡ್ಡಿದೆ.

ಪಿಪಿಇ ಕಿಟ್​ ಧರಿಸಿಯೇ ಸಪ್ತಪದಿ ತುಳಿದ ಜೋಡಿ: ವಿಡಿಯೋ ವೈರಲ್​

ಇದೆಲ್ಲದರ ನಡುವೆ ಜಾರ್ಖಂಡ್​ನಲ್ಲಿ ಕೋವಿಡ್​ ಸೋಂಕಿತನನ್ನ ಸಾಗಿಸಲು ಸ್ಟ್ರೆಚರ್​ ಸಿಗದ ಕಾರಣ ಬೈಕ್​ನಲ್ಲೇ ಸಾಗಿಸಿದ ದಾರುಣ ಘಟನೆ ವರದಿಯಾಗಿದೆ. ಪಲಮುವಿನ ಮೆಡಿನಿರೈ ಮೆಡಿಕಲ್​ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ಈ ದೃಶ್ಯವನ್ನ ಚಿತ್ರೀಕರಿಸಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಇಬ್ಬರು ಬೈಕ್ ಸವಾರರ ಮಧ್ಯೆ ವೃದ್ಧ ಕೊರೊನಾ ಸೋಂಕಿತ ಇರೋದನ್ನ ನೀವು ಕಾಣಬಹುದಾಗಿದೆ. ಈತನನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತೇ ಇಲ್ಲವೇ ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡಲು ಕರೆದುಕೊಂಡು ಹೋಗಲಾಗಿತ್ತೇ ಅನ್ನೋದು ಇನ್ನೂ ಅಸ್ಪಷ್ಟವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...