alex Certify ಪಿಪಿಇ ಕಿಟ್​ ಧರಿಸಿಯೇ ಸಪ್ತಪದಿ ತುಳಿದ ಜೋಡಿ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಪಿಇ ಕಿಟ್​ ಧರಿಸಿಯೇ ಸಪ್ತಪದಿ ತುಳಿದ ಜೋಡಿ: ವಿಡಿಯೋ ವೈರಲ್​

ವರನಿಗೆ ಕೊರೊನಾ ಪಾಸಿಟಿವ್​ ಬಂದ ಹಿನ್ನೆಲೆ ವಧು ವರರಿಬ್ಬರು ಪಿಪಿಇ ಕಿಟ್​ ಧರಿಸಿಯೇ ಸಪ್ತಪದಿ ತುಳಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಧು, ವರ ಸೇರಿದಂತೆ ಮೂವರು ಪಿಪಿಇ ಕಿಟ್​ ಧರಿಸಿರೋದನ್ನ ಕಾಣಬಹುದಾಗಿದೆ. ವಧು ವರರು ಅಗ್ನಿಕುಂಡ ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಿದೆ.

ಏಪ್ರಿಲ್​ 19ನೇ ತಾರೀಖಿನಂದು ವರ ಕೊರೊನಾ ಸೋಂಕಿಗೆ ಒಳಗಾಗಿದ್ದರು. ನಾವು ಈ ಮದುವೆಯನ್ನ ನಿಲ್ಲಿಸಲು ನಿರ್ಧರಿಸಿದ್ದೆವು. ಆದರೆ ಮಾರ್ಗಸೂಚಿಗಳನ್ನ ಆಧರಿಸಿ ವಧು – ವರರಿಗೆ ಪಿಪಿಇ ಕಿಟ್​ ಹಾಕಲಾಯಿತು ಎಂದು ಜಿಲ್ಲಾಡಳಿತದ ಅಧಿಕಾರಿ ನವೀನ್​ ಗರ್ಗ್​ ಹೇಳಿದ್ರು.

ದೇಶದಲ್ಲಿ ಕೊರೊನಾ ಕೇಸ್​ ಅಧಿಕವಾಗುತ್ತಿದ್ದಂತೆಯೇ ಮಧ್ಯ ಪ್ರದೇಶದಲ್ಲಿ ಮದುವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಕಠಿಣ ಮಾರ್ಗಸೂಚಿಗಳನ್ನ ವಿಧಿಸಲಾಗಿದೆ. ಮದುವೆಗೆ ಕೇವಲ 50 ಮಂದಿ ಅತಿಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

— ANI (@ANI) April 26, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...