alex Certify ಸ್ಫೂರ್ತಿದಾಯಕವಾಗಿದೆ ಈ ಮಹಿಳೆ ಮಾಡಿರುವ ‘ಸಾಧನೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಫೂರ್ತಿದಾಯಕವಾಗಿದೆ ಈ ಮಹಿಳೆ ಮಾಡಿರುವ ‘ಸಾಧನೆ’

ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿರುವ ಫುಡ್ ಡೆಲಿವರಿ ಗರ್ಲ್ ಒಬ್ಬರು ತಮ್ಮ ವೃತ್ತಿಯಲ್ಲಿ ಒಂದೇ ಒಂದು ಕ್ಯಾನ್ಸಲೇಷನ್ ಅಥವಾ ತಡವಾದ ಡೆಲಿವರಿ ಮಾಡದೇ ಅದ್ಭುತ ದಾಖಲೆಯೊಂದನ್ನು ಮಾಡಿದ್ದಾರೆ.

ಹತ್ತು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ತನ್ನದೇ ಸ್ವಂತ ಪರಿಶ್ರಮದಿಂದ ಮಗನನ್ನು ನೋಡಿಕೊಳ್ಳುತ್ತಿರುವ ಉಮಾ ಹೆಸರಿನ ಈ ಡೆಲಿವರಿ ಗರ್ಲ್ ಪ್ರತಿನಿತ್ಯ ತಮ್ಮ ಬೈಕ್‌ನಲ್ಲಿ 250-300 ಕಿಮೀ ಪ್ರಯಾಣ ಮಾಡುತ್ತಾರೆ. ಇಷ್ಟೆಲ್ಲದರ ನಡುವೆಯೂ ಸಹ ಅವರು ಒಂದೇ ಒಂದು ಕ್ಯಾನ್ಸಲೇಷನ್ ಅಥವಾ ತಡವಾದ ಡೆಲಿವರಿ ಮಾಡದೇ ಇರುವ ಕಾರಣ ಅವರಿಗೆ ಜೊಮ್ಯಾಟೊ ಇಂಡಿಯಾ ಡೈಮಂಡ್ ಸ್ಟಾರ್‌ ಗೌರವ ಕೊಟ್ಟು ಸನ್ಮಾನಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜೊಮ್ಯಾಟೋ ಇಂಡಿಯಾ, “ಯಾವುದೇ ಪ್ರಶಸ್ತಿಗಿಂತಲೂ ಬಹಳ ಮೊದಲೇ ಆಕೆ ನಮ್ಮೆಲ್ಲರ ಹೃದಯ ಗೆದ್ದಿದ್ದಾರೆ. ಉಮಾ, ನೀವು ಪ್ರತಿನಿತ್ಯ ಮಾಡುತ್ತಿರುವ ಕೆಲಸಕ್ಕೆ ಧನ್ಯವಾದ. ನಾವೆಲ್ಲಾ ಹೆಮ್ಮೆ ಪಡುವ ಕೆಲಸ ಮಾಡಿದ್ದೀರಿ” ಎಂದು ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...