alex Certify ಸತ್ಯ ಸಾಬೀತುಪಡಿಸಲು ಸಾಕ್ಷ್ಯ ಕೊಡಿ, ಕೇವಲ ಆರೋಪಿಯ ಅಪರಾಧ ಸಾಬೀತು ಮಾಡಲಲ್ಲ: ಪೊಲೀಸರಿಗೆ ಕೋರ್ಟ್ ತಾಕೀತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತ್ಯ ಸಾಬೀತುಪಡಿಸಲು ಸಾಕ್ಷ್ಯ ಕೊಡಿ, ಕೇವಲ ಆರೋಪಿಯ ಅಪರಾಧ ಸಾಬೀತು ಮಾಡಲಲ್ಲ: ಪೊಲೀಸರಿಗೆ ಕೋರ್ಟ್ ತಾಕೀತು

ಪೊಲೀಸರು ಆರೋಪಿಯ ಅಪರಾಧ ಸಾಬೀತುಪಡಿಸುವುದಕ್ಕಷ್ಟೇ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವುದಲ್ಲ. ಸತ್ಯವನ್ನು ಮುನ್ನೆಲೆಗೆ ತರಬೇಕು ಎಂದು ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನಡೆದ ಟ್ರ್ಯಾಕ್ಟರ್ ರ್ಯಾಲಿ ಅಥವಾ ಗಣರಾಜ್ಯೋತ್ಸವದ ದಿನ ಕೆಂಪುಕೋಟೆ ಬಳಿ ನಡೆದ ಘಟನೆಗೆ ನಾನು ಪ್ರಚೋದನೆ ನೀಡಿಲ್ಲ ಎಂದು ಸಮರ್ಥಿಸಿಕೊಂಡು ನಟ ದೀಪ್ ಸಿಧು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ.

ರಿಲಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಆಫರ್: ಮಾರ್ಚ್ 1 ರಿಂದ ವಿಶೇಷ ಪ್ಯಾಕೇಜ್ ಶುರು

ಅರ್ಜಿ ವಿಚಾರಣೆ ನಡೆಸಿದ ಸಿಎಂಎಂ ನ್ಯಾ.ಗಜೇಂದ್ರ ಸಿಂಗ್ ನಾಗರ್, ತನಿಖಾಧಿಕಾರಿಯು ಪ್ರಕರಣದ ತನಿಖೆಯನ್ನು ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತವಾಗಿ ನಡೆಸಬೇಕು. ಆರೋಪಿಯ ಅಪರಾಧ ಸಾಬೀತು ಮಾಡಲಷ್ಟೇ ಸಾಕ್ಷ್ಯ ಸಂಗ್ರಹಿಸುವುದಲ್ಲ, ಸತ್ಯ ಏನೆಂಬ ಚಿತ್ರಣವನ್ನು ನ್ಯಾಯಾಲಯದ ಮುಂದೆ ತರಬೇಕು ಎಂದರು.

ಸಿಧು ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಗುಪ್ತ, ಘಟನೆಗೆ ಪ್ರಚೋದನೆ ಕೊಡುವ ವೀಡಿಯೋವಾಗಲೀ, ಜನರನ್ನು ಜಮಾಯಿಸುವಂತೆ ಹೇಳಿದ ವಿಡಿಯೋ ಆಗಲಿ ಇಲ್ಲ. ಹೋರಾಟದಲ್ಲಿ ಭಾಗಿಯಾದ ವಿಡಿಯೋ ಇಟ್ಟುಕೊಂಡು, ಹೋರಾಟಕ್ಕೆ ಪ್ರಚೋದನೆ ನೀಡಿದಂತೆ ಬಿಂಬಿಸಲಾಗುತ್ತಿದೆ. ಈ ವಿಚಾರದಲ್ಲಿ ಸಿಧು ಮುಗ್ಧರು ಎಂಬುದು ಸಾಬೀತಾಗಬೇಕಿದ್ದರೆ ಎಲ್ಲ ವಿಡಿಯೋಗಳನ್ನು ದಾಖಲೆಗೆ ತರಬೇಕು, ಸಾಕ್ಷ್ಯವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...