alex Certify ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದರೂ ವ್ಯಾಸಂಗ ನಿಲ್ಲಿಸದ ವಿದ್ಯಾರ್ಥಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದರೂ ವ್ಯಾಸಂಗ ನಿಲ್ಲಿಸದ ವಿದ್ಯಾರ್ಥಿ..!

ಕೊರೊನಾ ವೈರಸ್​ನಿಂದಾಗಿ ಜನರ ಜೀವನವೇ ಸಂಪೂರ್ಣ ಬದಲಾಗಿದೆ. ಆದರೆ ಕೋವಿಡ್​ 19 ಸೋಂಕಿಗೆ ಚಾರ್ಟಡ್​ ಅಕೌಟೆಂಟ್​ ವ್ಯಾಸಂಗ ಮಾಡುತ್ತಿದ್ದ ಯುವಕನ ವ್ಯಾಸಂಗಕ್ಕೆ ಯಾವುದೇ ಅಡ್ಡಿ ತರಲು ಸಾಧ್ಯವಾಗಿಲ್ಲ.

ಕೊರೊನಾ ಸೋಂಕಿಗೆ ಒಳಗಾಗಿರುವ ಈ ವಿದ್ಯಾರ್ಥಿ ಓಡಿಶಾದ ಐಸೋಲೇಷನ್​ ಕೇಂದ್ರದಲ್ಲಿ ಇದ್ದುಕೊಂಡೇ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಓಡಿಶಾ ಕೇಡರ್​ ಐಎಎಸ್​ ಅಧಿಕಾರಿ ವಿಜಯ್​ ಕುಲಂಗೆ, ಕಲೆಕ್ಟರ್​​ ಹಾಗೂ ಡಿಎಂ ಗಂಜಮ್​​​ ವಿದ್ಯಾರ್ಥಿಯ ಫೋಟೋವನ್ನ ಶೇರ್​​ ಮಾಡಿದ್ದಾರೆ. ಈ ವಿದ್ಯಾರ್ಥಿ ಬ್ರಹ್ಮಾಪುರದ ಮಹಾರಾಜ ಕೃಷ್ಣ ಚಂದ್ರ ಗಜಪತಿ ಮೆಡಿಕಲ್​ ಕಾಲೇಜು ಹಾಗೂ ಆಸ್ಪತ್ರೆಯ ಐಸೋಲೇಷನ್​ ಕೇಂದ್ರದಲ್ಲಿದ್ದಾರೆ.

ಸಿಎ ವಿದ್ಯಾರ್ಥಿಯ ಓದಿನ ಕಡೆಗಿನ ಆಸಕ್ತಿಯನ್ನ ಗಮನಿಸಿದ ಅವರು, ಯಶಸ್ಸು ಅಕಸ್ಮಾತ್​ ಆಗಿ ಯಾರಿಗೂ ಸಿಗೋದಿಲ್ಲ. ಇದಕ್ಕೆ ಪ್ರಯತ್ನ ಮುಖ್ಯ. ನಾನು ಕೋವಿಡ್​ 19 ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿ ಸಿಎ ಪರೀಕ್ಷೆಗೆ ತಯಾರಾಗುತ್ತಿರೋದನ್ನ ಗಮನಿಸಿದೆ. ನಿಮ್ಮ ಶ್ರದ್ಧೆ ನಿಮ್ಮ ನೋವನ್ನ ಮರೆಸುತ್ತದೆ ಎಂದು ಹೇಳಿದ್ದಾರೆ.

ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಇಲ್ಲಿ ಸಿಗುತ್ತೆ ಹಣ..!

ಈ ವಿದ್ಯಾರ್ಥಿಯ ಫೋಟೋ ನೋಡಿದ ನೆಟ್ಟಿಗರು ವಿದ್ಯಾರ್ಥಿಯ ಪರಿಶ್ರಮಕ್ಕೆ ಶಹಬ್ಬಾಸ್​ ಎಂದಿದ್ದಾರೆ. ಕೊರೊನಾ ಕಾರಣದಿಂದಾಗಿ ಚಾರ್ಟಡ್​ ಅಕೌಂಟೆಂಟ್ಸ್​ ಆಫ್​ ಇಂಡಿಯಾ ಮೇ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನ ಮುಂದೂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...