alex Certify ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಇಲ್ಲಿ ಸಿಗುತ್ತೆ ಹಣ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಇಲ್ಲಿ ಸಿಗುತ್ತೆ ಹಣ..!

ಜನರಲ್ಲಿ ಕೊರೊನಾ ಲಸಿಕೆ ಸ್ವೀಕಾರವನ್ನ ಉತ್ತೇಜಿಸುವ ಸಲುವಾಗಿ ಅಮೆರಿಕದ ರಾಜ್ಯವೊಂದು ಕೋವಿಡ್ ಲಸಿಕೆ ಹಾಕಿಕೊಂಡವರಿಗೆ ಬಹುಮಾನ ನೀಡುತ್ತಿದೆ.

ವೆಸ್ಟ್​ ವರ್ಜಿನಿಯಾ ಎಂಬಲ್ಲಿ ಕೋವಿಡ್​ ಲಸಿಕೆ ಹಾಕಿಸಿಕೊಂಡ 16 ರಿಂದ 35 ವರ್ಷ ವಯಸ್ಸಿನವರಿಗೆ 100 ಡಾಲರ್​ ಹಣವನ್ನ ಬಹುಮಾನದ ರೂಪದಲ್ಲಿ ನೀಡಲಾಗ್ತಿದೆ.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಿಪಬ್ಲಿಕನ್​ ಪಕ್ಷದ ಜಿಮ್​ ಜಸ್ಟೀಸ್​ ಈ ಬಗ್ಗೆ ಘೋಷಣೆ ಮಾಡಿದ್ದರು. ಕೊರೊನಾ ಲಸಿಕೆ ಸ್ವೀಕರಿಸಿದ ಯುವ ಜನತೆಗೆ 100 ಡಾಲರ್​ ಹಣವನ್ನ ಬಹುಮಾನದ ರೂಪದಲ್ಲಿ ನೀಡುತ್ತೇವೆ ಎಂದು ಹೇಳಿದ್ದರು.

ಈ ಬಹುಮಾನದ ಪ್ಲಾನ್​ ಬಳಿಕ 16 ರಿಂದ 35 ವರ್ಷದ ಒಳಗಿನವರು ಲಸಿಕೆ ಕೇಂದ್ರದತ್ತ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಭಾಗದಲ್ಲಿ ಯುವಜನತೆ ಲಸಿಕೆ ಹಾಕಿಕೊಳ್ಳಲು ಹಿಂದೇಟು ಹಾಕುತ್ತಿದ್ದುದೇ ಈ ಕ್ರಮವನ್ನ ಜಾರಿಗೆ ತರಲು ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...