alex Certify ಸ್ಯಾನಿಟೈಸರ್ ಕದಿಯಲು ಬಂದವನು ಸಿಸಿ ಟಿವಿ ನೋಡಿ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾನಿಟೈಸರ್ ಕದಿಯಲು ಬಂದವನು ಸಿಸಿ ಟಿವಿ ನೋಡಿ ಮಾಡಿದ್ದೇನು ಗೊತ್ತಾ…?

ವಿಶ್ವವನ್ನು ಕಾಡುತ್ತಿರುವ ಕೊರೊನಾದಿಂದ ಕಾಪಾಡಿಕೊಳ್ಳಲು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಲು ಸ್ಯಾನಿಟೈಸರ್‌, ಮಾಸ್ಕ್‌ ಅವಶ್ಯಕವಾಗಿದೆ. ಆದರೆ ಈ ಸ್ಯಾನಿಟೈಸರ್‌ ಕದಿಯಲು ಬಂದ ವ್ಯಕ್ತಿಯೊಬ್ಬ ಸಿಸಿ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್‌ ಮೊರೆ ಹೋಗಿರುವ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಒಂದರಲ್ಲಿ, ವ್ಯಕ್ತಿಯೊಬ್ಬ ಸ್ಯಾನಿಟೈಸರ್‌ ಅನ್ನು ಕದಿಯಲು ಬಂದಿದ್ದಾನೆ. ಈ ವೇಳೆ ಖಾಲಿಯಿದ್ದ ಬಾಟಲಿಯಲ್ಲಿ ಸ್ಯಾನಿಟೈಸರ್‌ ಹಾಕಿಕೊಂಡಿದ್ದಾನೆ. ಆದರೆ ಹೊರಡುವ ವೇಳೆಗೆ ಅಲ್ಲಿ ಸಿಸಿ ಕ್ಯಾಮೆರಾ ಇರುವುದು ಗಮನಿಸಿ ಬಳಿಕ ಕೂಡಲೇ ಮುಖವನ್ನು ಮಾಸ್ಕ್‌ನಿಂದ ಮುಚ್ಚಿಕೊಂಡು, ಹಾಕಿಕೊಂಡಿದ್ದ ಸ್ಯಾನಿಟೈಸರ್‌ ಅನ್ನು ಪುನಃ ಅದೇ ಬಾಟಲಿಗೆ ಹಾಕಿದ್ದಾನೆ.

ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ವ್ಯಕ್ತಿಯ ಈ ನಡೆಗೆ ಅನೇಕ ನೆಟ್ಟಿಗರು ಕಾಲೆಳೆದಿದ್ದಾರೆ. ಈ ವಿಡಿಯೊವನ್ನು ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದು, ನೂರಾರು ಮಂದಿ ಕಾಮೆಂಟ್‌ ಮಾಡಿದ್ದಾರೆ.

സംഗതി പൊളിച്ചു ???

Posted by Kondotty Abu – കൊണ്ടോട്ടി അബു on Thursday, August 6, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...