alex Certify ಮಗಳ ಎದುರೇ 2ನೇ ಪತ್ನಿಯ ತಲೆಗೆ ರಾಡ್​ನಿಂದ ಹೊಡೆದು ಕೊಲೆಗೈದ ಪತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಎದುರೇ 2ನೇ ಪತ್ನಿಯ ತಲೆಗೆ ರಾಡ್​ನಿಂದ ಹೊಡೆದು ಕೊಲೆಗೈದ ಪತಿ..!

42 ವರ್ಷದ ವ್ಯಕ್ತಿಯೊಬ್ಬ ತನ್ನ 35 ವರ್ಷದ ಎರಡನೇ ಪತ್ನಿಯನ್ನ ಆಕೆಯ ಮೊದಲ ಪತಿಗೆ ಜನಿಸಿದ 7 ವರ್ಷದ ಮಗಳ ಮುಂದೆಯೇ ಭಾರವಾದ ಉಕ್ಕಿನ ರಾಡ್​​ನಿಂದ ತಲೆಯನ್ನ ಒಡೆದು ಕೊಂದು ಹಾಕಿದ್ದಾನೆ.

ಕೃತ್ಯ ನಡೆಸಿದ ಬಳಿಕ ಆರೋಪಿ ಮದನ್​ ತನ್ನ 8 ತಿಂಗಳ ಮಗುವಿನ ಸಮೇತ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು ಕಲವೇ ಗಂಟೆಗಳಲ್ಲಿ ಪೊಲೀಸರು ಆತನನ್ನ ಬಂಧಿಸಿ ಮಗುವನ್ನ ರಕ್ಷಿಸಿದ್ದಾರೆ.

ಕೊಲೆಯಾದ ಸರಿತಾ 2 ವರ್ಷಗಳ ಹಿಂದೆ ತನ್ನ ಮೊದಲ ಗಂಡನಿಂದ ದೂರಾಗಿ ಮಾಂಸ ವ್ಯಾಪಾರ ನಡೆಸುತ್ತಿದ್ದ ಮದನ್​​ನನ್ನ ಮದುವೆಯಾಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮದನ್​ ಕೂಡ ತನ್ನ ಮೊದಲ ಪತ್ನಿಯಿಂದ ವಿಚ್ಚೇದನ ಪಡೆದಿದ್ದು ಸರಿತಾಳನ್ನ ಮದುವೆಯಾಗಿದ್ದ. ಈ ದಂಪತಿ ಸರಿತಾಳ 7 ವರ್ಷದ ಮಗಳ ಜೊತೆಗೆ ಅವಾಲಡಿ ಬಳಿಯ ಮೆಲ್ಪಕ್ಕಂನಲ್ಲಿರುವ ಬಜಾನೈ ಕಾಯಿಲ್​​ ರಸ್ತೆಯಲ್ಲಿ ವಾಸಿಸುತ್ತಿದ್ದರು.
8 ತಿಂಗಳ ಹಿಂದೆ ಸರಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಈ ದಂಪತಿ ಆಗಾಗ್ಗೆ ಹಿಂದಿನ ವಿಚಾರಗಳ ಬಗ್ಗೆ ಜಗಳವಾಡುತ್ತಿದ್ದರು. ಮದನ್​ನ ಮೊದಲ ಪತ್ನಿಗೆ ಜನಿಸಿದ ಮಗಳು ಮದನ್​ಗೆ ಕರೆ ಮಾಡಿದ ವಿಚಾರವಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಅವಾಡಿ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಗುವಿನ ಸಮೇತ ಪರಾರಿಯಾಗಿದ್ದ ಮದನ್​ನ್ನ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಗ್ಗೆ ಸರಿತಾ ಮೊದಲ ಪತಿಯ ಪುತ್ರಿ ಮಾಹಿತಿ ನೀಡಿದ್ದು, ನಾನು ಎಷ್ಟು ಕೂಗಿಕೊಂಡರೂ ನೆರೆಹೊರೆಯವರು ಸಹಾಯಕ್ಕೆ ಬರಲಿಲ್ಲ. ತಂದೆ ಕೂಡ ನನ್ನ ಮಾತನ್ನ ಕೇಳಲಿಲ್ಲ ಎಂದು ಹೇಳಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...