alex Certify ಎಮ್ಮೆಗಳ ಕೊಟ್ಟಿಗೆಗೆ ನುಗ್ಗಿ ಬೆದರಿಸಲು ಮುಂದಾದ ಚಿರತೆ ಮರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಮ್ಮೆಗಳ ಕೊಟ್ಟಿಗೆಗೆ ನುಗ್ಗಿ ಬೆದರಿಸಲು ಮುಂದಾದ ಚಿರತೆ ಮರಿ

ಮುಂಬೈನ ಆರೆ ಪ್ರದೇಶದ ಮಿಲ್ಕ್‌ ಕಾಲೋನಿಯಲ್ಲಿರುವ ಹಸು/ಎಮ್ಮೆಗಳ ಕೊಟ್ಟಿಗೆಯೊಂದಕ್ಕೆ ಚಿರತೆ ಮರಿಯೊಂದು ವಿಸಿಟ್ ಕೊಟ್ಟಿದೆ. ಸುತ್ತಲಿನ 800 ಎಕರೆ ಪ್ರದೇಶ ಅರಣ್ಯಮಯವಾದ ಕಾರಣ ಚಿರತೆಗಳು ಇಲ್ಲಿ ಕಾಣುವುದು ಹೊಸದೇನಲ್ಲ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮೊದಲೇ ಭಯಭೀತಗೊಂಡ ಈ ಚಿರತೆ ಮರಿಯು ಸುತ್ತಲಿನ ಜಾನುವಾರುಗಳನ್ನು ಬೆದರಿಸುವುದನ್ನು ಕಾಣಬಹುದಾಗಿದೆ. ಬಳಿಕ ಸ್ಥಳೀಯ ಜನರು ಚಿರತೆ ಮರಿಯನ್ನು ಕಾಡಿನೊಳಗೆ ಕಳುಹಿಸಿದ್ದಾರೆ.

ಆನ್ಲೈನ್‌ನಲ್ಲಿ ಶೇರ್‌ ಮಾಡಿದ ಬಳಿಕ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪದೇ ಪದೇ ನೋಡುವ ಕಾರಣ ಚಿರತೆಗಳ ಬಗ್ಗೆ ಸ್ಥಳೀಯರಿಗೆ ಅಂಥಾ ಭಯವೇನೂ ಇರುವುದಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...