alex Certify ಲಗ್ನ ಪತ್ರಿಕೆಯಲ್ಲಿ ಲಾಲೂ ಪ್ರಸಾದ್ ಫೋಟೋ ಹಾಕಿಸಿದ ವರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಗ್ನ ಪತ್ರಿಕೆಯಲ್ಲಿ ಲಾಲೂ ಪ್ರಸಾದ್ ಫೋಟೋ ಹಾಕಿಸಿದ ವರ….!

ನಮ್ಮ ದೇಶದಲ್ಲಿ ರಾಜಕಾರಣಿಗಳನ್ನ ದೇವರಂತೆ ಕಾಣೋದು ಹೊಸದೇನಲ್ಲ. ಕೆಲವೊಮ್ಮೆ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಮೇಲಿರುವ ಅಭಿಮಾನವನ್ನ ಪ್ರದರ್ಶಿಸೋಕೆ ಇನ್ನಿಲ್ಲದ ಸರ್ಕಸ್​ ಮಾಡ್ತಾರೆ.

ಬಿಹಾರದ ವೈಶಾಲಿ ಜಿಲ್ಲೆಯ ಪವನ್​ ಯಾದವ್​​ ಎಂಬವರು ಏಪ್ರಿಲ್​ 23ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ವ್ಯಕ್ತಿಯ ಮದುವೆ ಆಮಂತ್ರಣ ಪತ್ರಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ದೇವರ ಫೋಟೋ ಇರಬೇಕಾದ ಜಾಗದಲ್ಲಿ ಲಾಲೂ ಪ್ರಸಾದ್​ ಯಾದವ್​ರ ಫೋಟೋವನ್ನ ಹಾಕಲಾಗಿದೆ.

ಕೆಂಪು ಹಾಗೂ ಬಂಗಾರ ಬಣ್ಣದ ಆಮಂತ್ರಣ ಪತ್ರಿಕೆಯ ಮೇಲ್ಭಾಗದಲ್ಲಿ ಲಾಲೂ ಪ್ರಸಾದ್​ರ ಫೋಟೋ ಪ್ರಿಂಟ್​ ಹಾಕಲಾಗಿದೆ. ಫೋಟೋದ ಕೆಳಗೆ ವಧು – ವರರ ಹೆಸರನ್ನ ಮುದ್ರಿಸಲಾಗಿದೆ. ಇದೇ ಆಮಂತ್ರಣ ಪತ್ರಿಕೆಯಲ್ಲಿ ಲಾಲೂ ಪ್ರಸಾದ್​ ಯಾದವ್​ರನ್ನ ಜೈಲಿನಿಂದ ಬಿಡುಗಡೆ ಮಾಡಬೇಕೆಂದೂ ವರ ಆಗ್ರಹಿಸಿದ್ದಾನೆ.

ಈ ಆಮಂತ್ರಣ ಪತ್ರಿಕೆಯನ್ನ ಲಾಲೂ ಪ್ರಸಾದ್​​ ಯಾದವ್​ರ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಪುತ್ರ ತೇಜಸ್ವಿ ಯಾದವ್​, ಮಾಜಿ ಆರೋಗ್ಯ ಸಚಿವ ತೇಜ್​ ಪ್ರತಾಪ್​ ಯಾದವ್​​ ಸೇರಿದಂತೆ ವಿವಿಧ ಆರ್​ಜೆಡಿ ನಾಯಕರಿಗೆ ಕಳುಹಿಸಿಕೊಡಲಾಗಿದೆ.

ಪವನ್​ ಯಾದವ್,​ ಲಾಲೂ ಪ್ರಸಾದ್​ ಯಾದವ್​ರನ್ನ ದೇವರಂತೆ ಆರಾಧಿಸುತ್ತಾರಂತೆ. ಲಾಲೂ ಪ್ರಸಾದ್​ ಯಾದವ್​ ಜೈಲಿನಿಂದ ಬಿಡುಗಡೆಯಾಗಬೇಕು. ನಾನು ಬಡವನಾದ ಕಾರಣ ನನಗೆ ಹಿರಿಯ ಅಧಿಕಾರಿಗಳು ಭೇಟಿ ಮಾಡಲು ಆಗುತ್ತಿಲ್ಲ. ಹೀಗಾಗಿ ನಾನು ಮದುವೆ ಆಮಂತ್ರಣ ಪತ್ರಿಕೆ ಮೂಲಕ ಈ ಅಭಿಯಾನ ಮಾಡುತ್ತಿದ್ದೇನೆ. ಲಾಲು ಪ್ರಸಾದ್​ ಬಿಡುಗಡೆಯಾಗುತ್ತಿದ್ದಂತೆ ನಮ್ಮ ಜೋಡಿಗೆ ಆಶೀರ್ವದಿಸಬೇಕೆಂಬುದು ನನ್ನ ಹಂಬಲವಾಗಿದೆ ಎಂದು ಪವನ್​ ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...