alex Certify ಬಿಹಾರ ರಾಜಕೀಯದಲ್ಲಿ ಹೊಸ ಗೇಮ್: ನಿತೀಶ್ ಪ್ಲಾನ್ ಉಲ್ಟಾ ಮಾಡಲು ಲಾಲೂ ಮಾಸ್ಟರ್ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಹಾರ ರಾಜಕೀಯದಲ್ಲಿ ಹೊಸ ಗೇಮ್: ನಿತೀಶ್ ಪ್ಲಾನ್ ಉಲ್ಟಾ ಮಾಡಲು ಲಾಲೂ ಮಾಸ್ಟರ್ ಪ್ಲಾನ್

ಪಾಟ್ನಾ: ಬಿಹಾರ ರಾಜಕೀಯದಲ್ಲಿ ಹೊಸ ಗೇಮ್ ಶುರುವಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ಲಾನ್ ಉಲ್ಟಾ ಮಾಡಲು ಆರ್.ಜೆ.ಡಿ. ನಾಯಕ ಲಾಲು ಪ್ರಸಾದ್ ಯಾದವ್ ತಂತ್ರ ರೂಪಿಸಿದ್ದಾರೆ.

ನಿತೀಶ್ ಕುಮಾರ್ ರಾಜೀನಾಮೆ ನೀಡಿದರೆ ಆರ್.ಜೆ.ಡಿ. ಹೊಸ ದಾಳ ಉರುಳಿಸಲು ಸಜ್ಜಾಗಿದ್ದು, ನಿತೀಶ್ ಕುಮಾರ್ ಬಹುಮತ ಸಾಬೀತಿಗೆ ಪಟ್ಟು ಹಿಡಿಯಲು ಪ್ಲಾನ್ ಮಾಡಿಕೊಂಡಿದೆ. ಈ ವೇಳೆ 16 ಜೆಡಿಯು ಶಾಸಕರನ್ನು ಸೆಳೆಯಲು ಲಾಲು ಪ್ರಸಾದ್ ಯಾದವ್ ಪ್ಲಾನ್ ಮಾಡಿಕೊಂಡಿದ್ದಾರೆ.

ಒಟ್ಟು 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ 122 ಮ್ಯಾಜಿಕ್ ನಂಬರ್ ಬೇಕಿದೆ, ಆರ್.ಜೆ.ಡಿ. 79, ಬಿಜೆಪಿ 78, ಜೆಡಿಯು 45, ಕಾಂಗ್ರೆಸ್ 19, ಎಡ ಪಕ್ಷಗಳು 16, ಹೆಚ್ಎಎಂ 4, 2 ಇತರೆ ಸದಸ್ಯ ಬಲವಿದೆ.

ಮೈತ್ರಿ ಬದಲಾವಣೆಯ ಪಂಟರ್ ಎನಿಸಿಕೊಂಡಿರುವ ನಿತೀಶ್ ಕುಮಾರ್ ಹಳೆ ದೋಸ್ತಿ ಬಿಜೆಪಿ ಜೊತೆಗೂಡುವುದು ಖಚಿತವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಆರ್.ಜೆ.ಡಿ. ಸಚಿವರನ್ನು ವಜಾಗೊಳಿಸಿ ಬಿಜೆಪಿ ಶಾಸಕರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುವ ಚಿಂತನೆ ನಿತೀಶ್ ಕುಮಾರ್ ಅವರದ್ದಾಗಿದೆ. ಇದಲ್ಲದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸದಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ಚರ್ಚೆ ನಡೆದಿದೆ.

ಇಂದು ರಾಜ್ಯಪಾಲರನ್ನು ಭೇಟಿಯಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಜೆ ವೇಳೆಗೆ ಎನ್.ಡಿ.ಎ. ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...