alex Certify 6 ಕೋಟಿ ರೂ. ಬಹುಮಾನದ ಲಾಟರಿ ಟಿಕೆಟ್‌ ನ್ನು ಪ್ರಾಮಾಣಿಕವಾಗಿ ಹಸ್ತಾಂತರಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ಕೋಟಿ ರೂ. ಬಹುಮಾನದ ಲಾಟರಿ ಟಿಕೆಟ್‌ ನ್ನು ಪ್ರಾಮಾಣಿಕವಾಗಿ ಹಸ್ತಾಂತರಿಸಿದ ಮಹಿಳೆ

6 ಕೋಟಿ ರೂಪಾಯಿ ಲಾಟರಿ ಹಣವನ್ನ ಪ್ರಾಮಾಣಿಕವಾಗಿ ಫಲಾನುಭವಿಗೆ ನೀಡುವ ಮೂಲಕ ಕೇರಳದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯನ್ನ ಸಂಪಾದಿಸಿದ್ದಾರೆ. ಸ್ಮಿಜಾ ಕೆ. ಮೋಹನ್​ ಎಂಬವರು ಜಾಕ್​ಪಾಟ್​ ಟಿಕೆಟ್​ನ್ನು ಚಂದ್ರನ್​ ಎಂಬವರಿಗೆ ಮಾರಾಟ ಮಾಡಿದ್ದರು.

ಆರ್ಥಿಕ ಸಂಕಷ್ಟವೇ ಹೆಚ್ಚಾಗಿರುವ ಈ ಕಠಿಣ ಸಂದರ್ಭದಲ್ಲಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಸ್ಮಿಜಾ, ಚಂದ್ರನ್​ ಎಂಬವರಿಗೆ ಗೆಲುವಿನ ಟಿಕೆಟ್​ನ್ನು ಪ್ರಾಮಾಣಿಕವಾಗಿ ಹಸ್ತಾಂತರಿಸಿದ್ದಾರೆ.

37 ವರ್ಷದ ಸ್ಮಿಜಾ ಬಳಿ ಮಾರಾಟವಾಗದ 12 ಟಿಕೆಟ್​ಗಳಿದ್ದವು. ಹೀಗಾಗಿ ಸ್ಮಿಜಾ ಈ ಟಿಕೆಟ್​ಗಳನ್ನ ವಾಟ್ಸಾಪ್​ ಗ್ರೂಪ್​ನಲ್ಲಿ ಶೇರ್​ ಮಾಡಿದ್ದರು. ಆದರೆ ಯಾರೂ ಕೂಡ ಟಿಕೆಟ್​ ಕೊಳ್ಳಲು ತಯಾರಿರಲಿಲ್ಲ.

ಇದಾದ ಬಳಿಕ ಸ್ಮಿಜಾ, ಚಂದ್ರನ್​ರನ್ನ ಸಂಪರ್ಕಿಸಿದ್ದಾರೆ. ಅವರು ಟಿಕೆಟ್​​ ಫೋಟೋಗಳನ್ನ ಕಳಿಸುವಂತೆ ಹೇಳಿ ಬಳಿಕ ತಮ್ಮಾಯ್ಕೆಯ ಸಂಖ್ಯೆಯನ್ನ ತಿಳಿಸಿದ್ದರು.
ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಸ್ಮಿಜಾ ಆ ಟಿಕೆಟ್​ನ್ನು ಚಂದ್ರನ್​ಗೆ ಪ್ರಾಮಾಣಿಕವಾಗಿ ಹಸ್ತಾಂತರಿಸಿದ್ದಾರೆ.

ನಾನು ಚಂದ್ರನ್​ರಿಗೆ ಟಿಕೆಟ್​ ಹಸ್ತಾಂತರ ಮಾಡಿದ ಬಳಿಕ ಸಾಕಷ್ಟು ಮಂದಿ ನನ್ನ ಪ್ರಾಮಾಣಿಕತೆಯನ್ನ ಹಾಡಿ ಹೊಗಳಿದ್ದಾರೆ. ಉದ್ಯಮದಲ್ಲಿ ಇವೆಲ್ಲ ಸಹಜ. ಗ್ರಾಹಕರು ತಾವು ಕಷ್ಟಪಟ್ಟು ದುಡಿದ ಹಣದಲ್ಲಿ ಟಿಕೆಟ್​ ಖರೀದಿ ಮಾಡುತ್ತಾರೆ. ಅಂದಮೇಲೆ ಅವರ ಜೊತೆ ಪ್ರಾಮಾಣಿಕವಾಗಿ ವರ್ತಿಸೋದು ನಮ್ಮ ಕರ್ತವ್ಯ ಎಂದು ಸ್ಮಿಜಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...