alex Certify ಕಂಗನಾ ಸಹೋದರಿಯರ ವಿರುದ್ಧದ ಪ್ರಕರಣ ಸಂಬಂಧ ವರದಿ ಕೇಳಿದ ಮುಂಬೈ ಕೋರ್ಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಗನಾ ಸಹೋದರಿಯರ ವಿರುದ್ಧದ ಪ್ರಕರಣ ಸಂಬಂಧ ವರದಿ ಕೇಳಿದ ಮುಂಬೈ ಕೋರ್ಟ್​

ಬಾಲಿವುಡ್​ ನಟಿ ಕಂಗನಾ ರಣಾವತ್​ ಹಾಗೂ ಆಕೆಯ ಸಹೋದರಿ ರಂಗೋಲಿ ಚಂಡೇಲಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಪೋಸ್ಟ್​ಗಳನ್ನ ಹಾಕಿದ್ದಕ್ಕಾಗಿ ನಡೆಯುತ್ತಿರುವ ವಿಚಾರಣೆಯ ಸಂಬಂಧ ತನಿಖಾ ಪ್ರಗತಿಯ ವರದಿಯನ್ನ ಸಲ್ಲಿಸುವಂತೆ ಮುಂಬೈ ಪೊಲೀಸರಿಗೆ ಮುಂಬೈನ ಮ್ಯಾಜಿಸ್ಟ್ರೇಟ್​ ನ್ಯಾಯಾಲಯ ನಿರ್ದೇಶನ ನೀಡಿದೆ.

ದ್ವೇಷಪೂರಿತ ಪೋಸ್ಟ್​​ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಂಗನಾ ಸಹೋದರಿಯರ ವಿರುದ್ಧ ವಕೀಲರೊಬ್ಬರು ದಾಖಲಿಸಿದ್ದ ಖಾಸಗಿ ದೂರಿನ ಸಂಬಂಧ ಕಳೆದ ವರ್ಷ ಮ್ಯಾಜಿಸ್ಟ್ರೇಟ್​ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ಸಂಬಂಧ ಡಿಸೆಂಬರ್​ 5ನೇ ತಾರೀಖಿನ ಒಳಗೆ ವರದಿ ಸಲ್ಲಿಸುವಂತೆ ಮ್ಯಾಜಿಸ್ಟ್ರೇಟ್​ ನ್ಯಾಯಾಲಯ ಕಳೆದ ವರ್ಷ ಅಕ್ಟೋಬರ್​ನಲ್ಲಿ ಅಂಬೋಲಿ ಪೊಲೀಸರಿಗೆ ಸೂಚನೆ ನೀಡಿತ್ತು.

ಆದರೆ ಮ್ಯಾಜಿಸ್ಟ್ರೇಟ್​ ನ್ಯಾಯಲಯ ನೀಡಿದ್ದ ಗಡುವಿನ ಒಳಗಾಗಿ ವರದಿಯನ್ನ ಸಲ್ಲಿಸುವಲ್ಲಿ ಪೊಲೀಸರು ವಿಫಲರಾಗಿದ್ದರು. ಬಳಿಕ ಈ ಅವಧಿಯನ್ನ ಜನವರಿ 5ನೇ ತಾರೀಖಿಗೆ ಮುಂದೂಡಲಾಗಿತ್ತು. ಆದರೆ ಈ ವೇಳೆಯಲ್ಲೂ ವರದಿ ಸಲ್ಲಿಸುವಲ್ಲಿ ಪೊಲೀಸರು ವಿಫಲರಾಗಿದ್ದರು.

ಒಂದೇ ಒಂದು ಟ್ವೀಟ್​ನಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನ ಕಳೆದುಕೊಂಡ್ರಾ ಸಚಿನ್​ ತೆಂಡೂಲ್ಕರ್..​..?

ಇದಾದ ಬಳಿಕ ಪೊಲೀಸರಿಗೆ ಫೆಬ್ರವರಿ 5ರಂದು ಹೊಸ ಗಡುವು ನೀಡಲಾಗಿದೆ. ಆದರೆ ಇಲ್ಲಿಯವರೆಗೆ ಪೊಲೀಸರು ಪ್ರಕರಣ ಸಂಬಂಧ ಯಾವುದೇ ವರದಿಯನ್ನ ಕೋರ್ಟ್​ಗೆ ಸಲ್ಲಿಸಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...