alex Certify ಕಂಟೈನ್ಮೆಂಟ್ ಪ್ರದೇಶದಲ್ಲಿ ಸ್ಯಾನಿಟೈಸ್ ಮಾಡಲು ಬಂತು ರೋಬೋಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಟೈನ್ಮೆಂಟ್ ಪ್ರದೇಶದಲ್ಲಿ ಸ್ಯಾನಿಟೈಸ್ ಮಾಡಲು ಬಂತು ರೋಬೋಟ್

ಕೊರೋನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಲಾಕ್ ಡೌನ್ ನಿಯಮ ಸಡಿಲಿಸಿ ಚಟುವಟಿಕೆಗಳನ್ನು ಪುನರಾರಂಭಿಸಲು ಅನುಮತಿಸಲಾಗಿದೆ.

ಈ ನಡುವೆ ಇನ್ನೂ ಕೂಡ ಕಂಟೈನ್ಮೆಂಟ್ ಪ್ರದೇಶಗಳು ಹಲವಾರು ಕಡೆ ಇದ್ದು, ಸ್ಥಳೀಯ ಆಡಳಿತಗಳು ಬಹಳ ಜಾಗರೂಕವಾಗಿ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಸಾಮಾಜಿಕ ಅಂತರ ಮತ್ತು ಮಾನವ ಹಸ್ತಕ್ಷೇಪವಿಲ್ಲದ ಚಟುವಟಿಕೆ ನಡೆಸುವ ಬಗ್ಗೆ ವಿವಿಧ ಪ್ರಯತ್ನಗಳು ನಡೆದಿವೆ. ಚೆನ್ನೈನಲ್ಲಿ ಗೌತಮ್ ಎಂಬ ಎಂಬುವರು ವಿನ್ಯಾಸಗೊಳಿಸಿರುವ ರೋಬೋಟ್ ಸೋಂಕು ನಿವಾರಕ ಸಿಂಪಡಿಸುತ್ತಿದೆ. ಸರಿಸುಮಾರು 30 ಲೀಟರ್ ಸೋಂಕು ನಿವಾರಕವನ್ನು ಹೊತ್ತೊಯ್ದು ಸಿಂಪಡಿಸುವ ಕಾರ್ಯಮಾಡುತ್ತದೆ.

ಈ ರೋಬೋಟ್ ಕಂಪ್ಯೂಟರ್ ಎನಿಮೇಟೆಡ್ ಕಾಮಿಡಿ ಚಿತ್ರ ಶೆರ್ಕ್ ನಲ್ಲಿ ಬರುವ ಶೆರ್ಕ್ ಪಾತ್ರಧಾರಿಯಂತೆಯೂ ಕಾಣಿಸುತ್ತದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...