alex Certify ಡೆಂಗ್ಯೂ, ಮಲೇರಿಯಾ, ಕೊರೊನಾದ ಬಳಿಕ ಹಾವು ಕಚ್ಚಿಸಿಕೊಂಡರೂ ಬದುಕುಳಿದ ವ್ಯಕ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಂಗ್ಯೂ, ಮಲೇರಿಯಾ, ಕೊರೊನಾದ ಬಳಿಕ ಹಾವು ಕಚ್ಚಿಸಿಕೊಂಡರೂ ಬದುಕುಳಿದ ವ್ಯಕ್ತಿ…!

ಕೊರೊನಾ ವೈರಸ್​, ಡೆಂಗ್ಯೂ ಹಾಗೂ ಮಲೇರಿಯಾದಂತಹ ಮಾರಕ ಕಾಯಿಲೆಗಳಿಂದ ಬಳಲಿದ್ದ ಬ್ರಿಟಿಷ್​ ಮೂಲದ ವ್ಯಕ್ತಿ ರಾಜಸ್ಥಾನದಲ್ಲಿ ಹಾವು ಕಚ್ಚಿಸಿಕೊಂಡ ಬಳಿಕ ಆರೋಗ್ಯವಂತನಾಗಿದ್ದಾನೆ.

ಇಯಾನ್​ ಜೋನ್ಸ್ ಎಂಬವರು ಜೋಧ್​ಪುರ ಜಿಲ್ಲೆಯಲ್ಲಿ ಹಾವಿನಿಂದ ಕಚ್ಚಿಸಿಕೊಂಡಿದ್ದರು. ಅವರನ್ನ 350 ಕಿಲೊಮೀಟರ್​ ದೂರದ ಜೋಧಪುರ ನಗರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಈ ವಿಚಾರವಾಗಿ ಮಾತನಾಡಿದ ವೈದ್ಯ ಅಭಿಷೇಕ್​, ಹಳ್ಳಿಯೊಂದರಲ್ಲಿ ಹಾವು ಕಚ್ಚಿಸಿಕೊಂಡ ಜೋನ್ಸ್ ನಮ್ಮ ಆಸ್ಪತ್ರೆಗೆ ಬಂದಿದ್ದರು. ಜೋನ್ಸ್ ಎರಡು ಬಾರಿ ಕೊರೊನಾ ಪಾಸಿಟಿವ್​ ಆಗಿದ್ದರು. ಹಾವು ಕಚ್ಚಿಸಿಕೊಂಡ ಬಳಿಕವೂ ಚೇತರಿಸಿಕೊಂಡಿದ್ದಾರೆ ಅಂತಾ ಹೇಳಿದ್ರು.

ಇನ್ನು ಇದೇ ವಿಚಾರವಾಗಿ ಮಾತನಾಡಿದ ಜೋನ್ಸ್ ಪುತ್ರ, ನನ್ನ ತಂದೆ ಒಬ್ಬ ಹೋರಾಟಗಾರ. ಈ ಮೊದಲು ಡೆಂಗ್ಯೂ ಹಾಗೂ ಮಲೇರಿಯಾದಂತ ಮಾರಕ ಕಾಯಿಲೆಗಳಿಂದ ಬಳಲಿದ್ದರು. ಭಾರತದಲ್ಲಿದ್ದ ಸಮಯದಲ್ಲಿ ಎರಡು ಬಾರಿಗೆ ಕೊರೊನಾ ಸೋಂಕಿಗೆ ಒಳಗಾದ್ರು. ಇದೀಗ ಹಾವಿನಿಂದ ಕಚ್ಚಿಸಿಕೊಂಡರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...