alex Certify SHOCKING: ಪರೀಕ್ಷೆಗೆ ಓದಿಲ್ಲ ಎಂದು ದೊಣ್ಣೆಯಿಂದ ಬಡಿದು ಮಗಳನ್ನು ಕೊಂದ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಪರೀಕ್ಷೆಗೆ ಓದಿಲ್ಲ ಎಂದು ದೊಣ್ಣೆಯಿಂದ ಬಡಿದು ಮಗಳನ್ನು ಕೊಂದ ತಂದೆ

ಸಿರೋಹಿ: ಪರೀಕ್ಷೆಗೆ ಸರಿಯಾಗಿ ಓದದ, ತಯಾರಿ ನಡೆಸದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ 17 ವರ್ಷದ ಮಗಳನ್ನು ಥಳಿಸಿ ಕೊಂದಿದ್ದಾನೆ. ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.

ಆರೋಪಿ ಪ್ರೇಮ್ ನಗರದ ನಿವಾಸಿ ಫತೇ ಮೊಹಮ್ಮದ್(42) ನನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್ಪಿ) ಪುಷ್ಪೇಂದ್ರ ವರ್ಮಾ ತಿಳಿಸಿದ್ದಾರೆ.

11ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ತನ್ನ ಮಗಳು ಪರೀಕ್ಷೆಗೆ ಓದದೇ ಇರುವುದಕ್ಕೆ ಮೊಹಮ್ಮದ್ ಕೋಪಗೊಂಡಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಗುರುವಾರ ದೊಣ್ಣೆಯಿಂದ ಆಕೆಗೆ ಥಳಿಸಿದ್ದಾನೆ. ಬಾಲಕಿಯ ಚಿಕ್ಕಪ್ಪ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ತಂದೆಯನ್ನು ಶನಿವಾರ ಬಂಧಿಸಲಾಗಿದ್ದು, ಕೊಲೆಗೈದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ.

ಆಂತರಿಕ ಗಾಯಗಳಿಂದಾಗಿ ಹುಡುಗಿ ಸಾವನ್ನಪ್ಪಿರಬಹುದು, ಆದರೆ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ನಿಖರವಾದ ಕಾರಣವನ್ನು ಬಹಿರಂಗಪಡಿಸಲಾಗುವುದು ಎಂದು ಡಿಎಸ್ಪಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...