alex Certify ಪೊಲೀಸರ ವಿಚಾರಣೆಗೆ ಹಾಜರಾದ ಕಾಮಿಡಿಯನ್​ ಕಪಿಲ್​ ಶರ್ಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರ ವಿಚಾರಣೆಗೆ ಹಾಜರಾದ ಕಾಮಿಡಿಯನ್​ ಕಪಿಲ್​ ಶರ್ಮಾ

ಮುಂಬೈ ಪೊಲೀಸರು ವಶಪಡಿಸಿಕೊಂಡಿರುವ ನಕಲಿ ನೋಂದಾಯಿತ ಕಾರುಗಳ ಪ್ರಕರಣ ಸಂಬಂಧ ಪ್ರಸಿದ್ಧ ಕಾಮಿಡಿಯನ್​ ಕಪಿಲ್​ ಶರ್ಮಾರನ್ನ ಮುಂಬೈ ಸಿಐಯು ವಿಚಾರಣೆಗೆ ಕರೆದಿದ್ದಾರೆ.

ಮುಂಬೈ ಅಪರಾಧ ಗುಪ್ತಚರ ಘಟಕದ ಎಪಿಐ ಸಚಿನ್​ ವಾಜೆ ಕಪಿಲ್​ ಶರ್ಮಾರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಪೊಲೀಸ್​ ನೋಟಿಸ್​ಗೆ ಪ್ರತಿಕ್ರಿಯಿಸಿದ ಕಾಮಿಡಿಯನ್​ ಕಪಿಲ್ ಶರ್ಮಾ ಮುಂಬೈನ ಅಪರಾಧ ವಿಭಾಗದ ಬ್ರ್ಯಾಂಚ್​​ಗೆ ಹಾಜರಾಗಿದ್ದಾರೆ. ವಿಚಾರಣೆ ವೇಳೆ ಕಪಿಲ್​ ಶರ್ಮಾ ತಾವು ವ್ಯಾನಿಟಿ ವ್ಯಾನ್​ಗಾಗಿ ಕಾರ್​​​ ವಿನ್ಯಾಸಕ ದಿಲೀಪ್​ ಛಾಬ್ರಿಯಾಗೆ ಹಣ ಪಾವತಿಸಿದ್ದಾಗಿ ಹೇಳಿದ್ದಾರೆ.

ವ್ಯಾನಿಟಿ ಕಾರ್​ ಒಂದನ್ನ ಕೊಳ್ಳಬೇಕು ಎಂದು ಕೊಂಡಿದ್ದ ಕಪಿಲ್​ ಶರ್ಮಾ ಇದಕ್ಕಾಗಿ ಕಾರು ವಿನ್ಯಾಸಕ ದಿಲೀಪ್​ ಛಾಬ್ರಿಯಾಗೆ ಹಣ ಪಾವತಿ ಮಾಡಿದ್ದರಂತೆ. ಆದರೆ ಆತ ಕೆಲಸವನ್ನ ಪೂರ್ಣಗೊಳಿಸದ ಕಾರಣ ದೂರನ್ನ ದಾಖಲಿಸಿದ್ದರು. ಛಾಬ್ರಿಯಾ ವಿರುದ್ಧ ಇದೀಗ ನಕಲಿ ನೋಂದಾಯಿತ ಕಾರುಗಳ ಪ್ರಕರಣ ಸಂಬಂಧ ಕೇಸ್​ ದಾಖಲಾಗಿದೆ. ಹೀಗಾಗಿ ಪೊಲೀಸರು ಕಪಿಲ್​ ಶರ್ಮಾರನ್ನ ಕಚೇರಿಗೆ ಕರೆಯಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...