alex Certify ಮನೆಯಲ್ಲಿ ಇಲ್ಲದಿದ್ದರೂ ಕಾರಿನಲ್ಲಿರಲೇಬೇಕು ಏರ್ ಪ್ಯೂರಿಫೈಯರ್; ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಇಲ್ಲದಿದ್ದರೂ ಕಾರಿನಲ್ಲಿರಲೇಬೇಕು ಏರ್ ಪ್ಯೂರಿಫೈಯರ್; ಇದರ ಹಿಂದಿದೆ ಈ ಕಾರಣ

ಕಳೆದ ಕೆಲವು ವರ್ಷಗಳಿಂದ ವಾಯು ಮಾಲಿನ್ಯದ ಸಮಸ್ಯೆ ಸಾಕಷ್ಟು ಹೆಚ್ಚಾಗಿದೆ. ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಂತೂ ದೆಹಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾತಾವರಣ ಸಂಪೂರ್ಣ ಕಲುಷಿತವಾಗುತ್ತದೆ. ಅನೇಕ ಜನರು ಉಸಿರಾಟದ ತೊಂದರೆಯಿಂದ ಬಳಲುತ್ತಾರೆ. ಇದು ಕೇವಲ ದೆಹಲಿ ಅಥವಾ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಪರಿಸ್ಥಿತಿಯಲ್ಲ, ದೇಶದ ಅನೇಕ ದೊಡ್ಡ ನಗರಗಳಲ್ಲಿ ವಾಯು ಮಾಲಿನ್ಯದ ಸಮಸ್ಯೆ ವಿಪರೀತವಾಗಿದೆ.

ಹಾಗಾಗಿ ಗಾಳಿ ಶುದ್ಧೀಕರಣದ ಅಗತ್ಯವನ್ನು ಜನರು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ. ಜನರು ತಮ್ಮ ಮನೆಗಳಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು ಅಳವಡಿಸುತ್ತಿದ್ದಾರೆ. ಕೇವಲ ಮನೆಗಳಲ್ಲಿ ಮಾತ್ರವಲ್ಲ ಕಾರುಗಳಲ್ಲಿ ಕೂಡ ಏರ್ ಪ್ಯೂರಿಫೈಯರ್‌ಗಳ ಅಗತ್ಯವಿದೆ.

ಅನೇಕ ಕಂಪನಿಗಳ ಕಾರಿನಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು ಅಳವಡಿಸಲಾಗ್ತಿದೆ. ಕಾರುಗಳಿಗಾಗಿಯೇ ಪ್ರತ್ಯೇಕ ಸಣ್ಣ ಮತ್ತು ಪೋರ್ಟಬಲ್ ಏರ್ ಪ್ಯೂರಿಫೈಯರ್‌ಗಳು ಸಹ ಲಭ್ಯವಿವೆ.

ಸಾಮಾನ್ಯವಾಗಿ ವಾಯುಮಾಲಿನ್ಯವು ಮನೆಯೊಳಗಲ್ಲ ಬದಲಾಗಿ ಹೆಚ್ಚು ಟ್ರಾಫಿಕ್ ಇರುವ ಹೊರಜಗತ್ತಿನಲ್ಲಿರುತ್ತದೆ. ಎಲ್ಲಾ ವಾಹನಗಳು ಹಾನಿಕಾರಕ ಅನಿಲಗಳನ್ನು ಬಿಡುಗಡೆ ಮಾಡುತ್ತಿರುತ್ತವೆ. ಕಾರಿನಿಂದ ಹೊರಬರುವ ಅನಿಲಗಳು ನಮ್ಮ ಕಾರಿನ ಕ್ಯಾಬಿನ್‌ಗೆ ಬರುತ್ತವೆ ಮತ್ತು ಒಳಗಿನ ಗಾಳಿಯು ಇದರಿಂದ ಕಲುಷಿತವಾಗುತ್ತದೆ. ಟ್ರಾಫಿಕ್‌ನಲ್ಲಿ ವಾಹನ ಚಾಲನೆ ಮಾಡುವಾಗ ಇದು ಹೆಚ್ಚು ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕಾರಿನಲ್ಲೂ ಏರ್ ಪ್ಯೂರಿಫೈಯರ್ ಇರುವುದು ಮುಖ್ಯವಾಗುತ್ತದೆ.

ಏರ್‌ಪ್ಯೂರಿಫೈಯರ್‌, ಕಾರಿನೊಳಗಿನ ಗಾಳಿಯಲ್ಲಿರುವ ಧೂಳು, ಹೊಗೆ, ಬ್ಯಾಕ್ಟೀರಿಯಾ, ವೈರಸ್‌ಗಳು, ಅಲರ್ಜಿ ಮತ್ತು ಹಾನಿಕಾರಕ ಅನಿಲಗಳನ್ನು ತೆಗೆದುಹಾಕುವ ಮೂಲಕ ಗಾಳಿಯನ್ನು ಸ್ವಚ್ಛಗೊಳಿಸುತ್ತದೆ. ಇದರಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ.

ಕಲುಷಿತ ಗಾಳಿಯಿಂದಾಗಿ ಉಸಿರಾಟದ ತೊಂದರೆ, ಅಲರ್ಜಿ, ಅಸ್ತಮಾ ಮತ್ತು ಹೃದ್ರೋಗದಂತಹ ಗಂಭೀರ ಸಮಸ್ಯೆಗಳಾಗುತ್ತವೆ. ಗಾಳಿಯನ್ನು ಸ್ವಚ್ಛಗೊಳಿಸುವ ಮೂಲಕ ಈ ಅಪಾಯಗಳನ್ನು ಕಡಿಮೆ ಮಾಡಲು ಏರ್ ಪ್ಯೂರಿಫೈಯರ್ ಸಹಾಯ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...