alex Certify ಹಾಡಿಗಿಂತ ಹೆಚ್ಚಾಗಿ ಗಮನ ಸೆಳೆದಿದ್ದು ಕಪಿಲ್​ ಶರ್ಮಾರ ಕಾರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಿಗಿಂತ ಹೆಚ್ಚಾಗಿ ಗಮನ ಸೆಳೆದಿದ್ದು ಕಪಿಲ್​ ಶರ್ಮಾರ ಕಾರು…!

ಹಾಸ್ಯನಟ ಕಪಿಲ್​ ಶರ್ಮಾ ಇತ್ತೀಚೆಗೆ “ಬ್ರೌನ್​ ಮುಂಡೆ’ ಹಾಡಿನ ಸ್ಪೂಫ್​ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ “ವೇಹ್ಲೆ ಮುಂಡೆ’ ಎಂಬ ಹೆಸರಿನಲ್ಲಿ ಪೋಸ್ಟ್​ ಮಾಡಿದ್ದಾರೆ. ವಿಡಿಯೋದಲ್ಲಿ ಗಮನವನ್ನು ಆಕರ್ಷಿಸಿದ್ದು ಫ್ಯಾನ್ಸಿ ಎಸ್​ಯುವಿ.

ವಿಡಿಯೊದಲ್ಲಿ ಲಕಲಕ ಹೊಳೆಯುವ ಕ್ಯಾಡಿಲಾಕ್​ ಎಸ್ಕಲೇಡ್​ ಸ್ಪೋರ್ಟ್​ ಪ್ಲಾಟಿನಂ ಎಸ್​ಯುವಿ ಕಾಣಿಸಿದ್ದು, ಕಂಪನಿಯು ತನ್ನ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡದ ಕಾರಣ ಭಾರತದಲ್ಲಿ ಅತ್ಯಂತ ಅಪರೂಪ.

“ಬ್ರೌನ್​ ಮುಂಡೆ’ ಯಶಸ್ಸಿನ ಬಳಿಕ “ವೇಹ್ಲೆ ಮುಂಡೆ’ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಕೇಳಿಕೊಂಡಿರುವ ಕಪಿಲ್​ ಶರ್ಮಾ, ಐಷಾರಾಮಿ ಕಾರಿನಿಂದ ಗತ್ತಿನಲ್ಲಿ ಇಳಿದು ಬರುವ ವಿಡಿಯೋ ನೋಡಬಹುದಾಗಿದೆ.

ಕಪಿಲ್​ ಶರ್ಮಾ ಕಾರುಗಳ ಆಸಕ್ತಿ ಹೆಚ್ಚು ಚರ್ಚೆಯಲ್ಲಿದೆ. ಅವರ ಇನ್​ಸ್ಟಾಗ್ರಾಮ್​ನಲ್ಲಿ ಇತ್ತೀಚೆಗೆ ಡಾಡ್ಜ್​ ಚಾಲೆಂಜರ್​ ಹೆಲ್​ಕ್ಯಾಟ್​ನೊಂದಿಗೆ ಅವರ ಚಿತ್ರ ಕಾಣಿಸಿತ್ತು. ಈ ಫೋಟೋವನ್ನು ಕೆನಡಾದಲ್ಲಿ ತೆಗೆಯಲಾಗಿದೆ.

ಕಪಿಲ್​ ಶರ್ಮಾ ಬೆಂಜ್​ 400 ಡಿಎಸ್​ಯುವಿ ಹೊಂದಿದ್ದಾರೆ. ಇದು ಸಹ ಸಾಕಷ್ಟು ದುಬಾರಿಯಾಗಿದೆ, ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 1.16 ಕೋಟಿ ರೂ.(ಎಕ್ಸ್​ ಶೋ ರೂಂ).

ಕಪಿಲ್​ ಶರ್ಮಾ ಜತೆಗಿದ್ದ ಕ್ಯಾಡಿಲಾಕ್​ ಎಸ್ಕಲೇಡ್​ನ ಐದನೇ ತಲೆಮಾರಿನ ಮಾದರಿಯಲ್ಲಿ ಒಂದಾಗಿದೆ. 5.5 ಮೀಟರ್​ ಉದ್ದವನ್ನು ಹೊಂದಿದ್ದು ತ್ರೀ ಸೀಟರ್​ ಮತ್ತು ಎಂಟು-ಆಸನಗಳ ಎಸ್​ಯುವಿ ಗಳನ್ನು ಹೆಚ್ಚಾಗಿ ಉತ್ತರ ಅಮೆರಿಕಾದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...