alex Certify ಕಾಮದಾಸೆ ತೀರಿಸಿಕೊಳ್ಳಲು ಶಿಶ್ನದೊಳಗೆ ಕೇಬಲ್‌ ತೂರಿಸಿಕೊಂಡ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮದಾಸೆ ತೀರಿಸಿಕೊಳ್ಳಲು ಶಿಶ್ನದೊಳಗೆ ಕೇಬಲ್‌ ತೂರಿಸಿಕೊಂಡ ಭೂಪ

ಗವಾಹಟಿ: ಕಾಮ ಉತ್ಕಟತೆಯನ್ನು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ತನ್ನ ಖಾಸಗಿ ಜಾಗದಿಂದ ಮೊಬೈಲ್ ಕೇಬಲ್ ತೂರಿಸಿಕೊಂಡು ತೊಂದರೆಗೀಡಾದ ಘಟನೆ ಅಸ್ಸಾಂನಲ್ಲಿ ಬೆಳಕಿಗೆ ಬಂದಿದೆ.

ಆಸ್ಪತ್ರೆಯೊಂದರ ತಜ್ಞ ವೈದ್ಯ ಡಾ.ವಾಲಿವುಲ್ ಇಸ್ಲಾಂ ಯುವಕನೊಬ್ಬನ ಶಸ್ತ್ರ ಚಿಕಿತ್ಸೆ ಮಾಡಿ ಮೂತ್ರಕೋಶದಿಂದ ಕೇಬಲ್ ತೆಗೆದಿದ್ದಾರೆ.

ಹೊಟ್ಟೆ ನೋವು ಎಂದು ಹೇಳಿಕೊಂಡು ಆಸ್ಪತ್ರೆಗೆ ಬಂದ ಯುವಕ, ತಾನು ಕೇಬಲ್ ನುಂಗಿದ್ದೇನೆ ಎಂದ. ಇದರಿಂದ ಆತಂಕಗೊಂಡ ವೈದ್ಯರು ಎಂಡೊಸ್ಕೋಪಿ ಮಾಡಿದರು. ಆದರೆ, ಯಾವುದೇ ವಸ್ತು ಕಾಣಿಸಲಿಲ್ಲ. ನಂತರ ಎಕ್ಸ್‌ ರೇ ಮಾಡಿದಾಗ ಮೂತ್ರಕೋಶದಲ್ಲಿ ಕೇಬಲ್ ಕಾಣಿಸಿದೆ. ಶಸ್ತ್ರ ಚಿಕಿತ್ಸೆಯ ನಂತರ ಯುವಕ ಬಾಯಿ ಬಿಟ್ಟು ಸತ್ಯ ಹೇಳಿದ್ದಾನೆ. ಆತ ಕೇಬಲ್ ನುಂಗಿದ್ದಲ್ಲ. ತನ್ನ ಶಿಶ್ನದಿಂದ ಕೇಬಲ್ ತೂರಿಸಿಕೊಂಡಿದ್ದ. ಕಾಮ ತೃಷೆಯನ್ನು ತೀರಿಸಿಕೊಳ್ಳಲು ಇದೊಂದು ರೀತಿಯ ಹಸ್ತಮೈಥುನವಾಗಿದೆ.

ಆತ ಕೇಬಲ್ ಮಾತ್ರವಲ್ಲ, ಇನ್ನೂ ಹಲವು ವಸ್ತುಗಳನ್ನು, ಶಿಶ್ನದಿಂದ ತೂರಿಸುತ್ತಿದ್ದ, ಒಂದು ದಿನ ಹಾಗೆ ಮಾಡುವಾಗ ಕೇಬಲ್ ಒಳಗೆ ಹೋಗಿ ಬಿಟ್ಟಿದೆ. ಇದಾಗಿ ಐದು ದಿನದ ನಂತರ ಆತ ತಮ್ಮ ಬಳಿ ಬಂದ ಎಂದು ವೈದ್ಯರು ಮಾಧ್ಯಮವೊಂದಕ್ಕೆ ಹೇಳಿದ್ದಾರೆ. “ನನ್ನ 25 ವರ್ಷದ ವೈದ್ಯಕೀಯ ವೃತ್ತಿಯಲ್ಲಿ ಇದು ಮೊದಲ ಅಚ್ಚರಿಯ ಪ್ರಕರಣವಾಗಿದೆ. ಇದರಲ್ಲಿ ಯುವಕನ ತಪ್ಪು ಎಂದು ಹೇಳಲಾಗದು. ಆತನ ಮಾನಸಿಕ ಪರಿಸ್ಥಿತಿ ಆತನನ್ನು ಹಾಗೆ ಮಾಡಿಸಿದೆ” ಎಂದು ವೈದ್ಯ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...