alex Certify ಹೆಡೆ ಎತ್ತಿ ನಿಂತ ಹಾವಿಗೆ ಹುಟ್ಟುಹಬ್ಬದ ಶುಭ ಕೋರಿದ ಯುವಕರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಡೆ ಎತ್ತಿ ನಿಂತ ಹಾವಿಗೆ ಹುಟ್ಟುಹಬ್ಬದ ಶುಭ ಕೋರಿದ ಯುವಕರು…!

ಮನುಷ್ಯರ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸುವುದ ಕಂಡು, ಕೇಳಿದ್ದೇವೆ. ಮನೆಯಲ್ಲಿನ ಸಾಕುಪ್ರಾಣಿಯ ಹುಟ್ಟುಹಬ್ಬ ಮಾಡುವುದನ್ನೂ ನೋಡಿದ್ದೇವೆ.

ಆದರೆ, ಯಾರಾದರೂ ಹಾವಿನ ಹುಟ್ಟು ಹಬ್ಬ ಮಾಡಿದ್ದನ್ನು ನೋಡಿದ್ದೀರಾ ? ಕೇಳಿದ್ದೀರಾ ?

ಇಲ್ಲೊಂದು ಯುವಕರ ಗುಂಪು ನಾಗರ ಪಂಚಮಿಯಂದು ಇದೇ ಕೆಲಸ ಮಾಡಿದೆ.

ರಸ್ತೆ ಮಧ್ಯೆ ಹೆಡೆ ಎತ್ತಿ ನಿಂತಿದ್ದ ನಾಗರಹಾವನ್ನು ಸುತ್ತುವರಿದು, ಹ್ಯಾಪಿ ಬರ್ತಡೇ ಟು ಯು ನಾಗಪ್ಪ ಎಂದು ಚಪ್ಪಾಳೆ ತಟ್ಟುತ್ತಾ ವಿಶ್ ಮಾಡಿದ್ದಾರೆ. ಭಾಯಿ ಸಾಬ್ ಕಾ ಬರ್ತಡೇ ಎನ್ನುತ್ತಾ ಕೇಕರ ಹಾಕಿ ನಕ್ಕಿದ್ದಾರೆ. ಸಾಲದ್ದಕ್ಕೆ ಬರ್ತಡೇ ಪಾರ್ಟಿ ಎಲ್ಲಿ ಭಾಯ್ ಎಂದಿದ್ದಾರೆ. ಇದನ್ನು ಕಂಡ ನಾಗರಹಾವು ಅಷ್ಟೇ ಗಲಿಬಿಲಿಯಿಂದ ಎಲ್ಲರನ್ನೂ ನೋಡುತ್ತಾ ನಿಂತಿತ್ತು. ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...