alex Certify ’ಜನತಾ ಕರ್ಫ್ಯೂಗೆ’ ವರ್ಷ: ಚಪ್ಪಾಳೆ, ತಟ್ಟೆ-ಜಾಗಟೆಗಳ ಭರಾಟೆ ನೆನೆದು ನಗೆಗಡಲಲ್ಲಿ ತೇಲಿದ ನೆಟ್ಟಿಗ ಸಮುದಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಜನತಾ ಕರ್ಫ್ಯೂಗೆ’ ವರ್ಷ: ಚಪ್ಪಾಳೆ, ತಟ್ಟೆ-ಜಾಗಟೆಗಳ ಭರಾಟೆ ನೆನೆದು ನಗೆಗಡಲಲ್ಲಿ ತೇಲಿದ ನೆಟ್ಟಿಗ ಸಮುದಾಯ

ಕೋವಿಡ್-19 ನಿಯಂತ್ರಣಕ್ಕೆಂದು ದೇಶವಾಸಿಗಳಿಗೆ ಜನತಾ ಕರ್ಫ್ಯೂ ಆಚರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿ ಒಂದು ವರ್ಷ ಕಳೆದಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಏರಿಕೆ ಕಾಣುವ ಆತಂಕದಿಂದ ಹೇರಲಾಗಿದ್ದ ಈ ಲಾಕ್‌ಡೌನ್ ಅವಧಿಯಲ್ಲಿ ಇಡಿ ದೇಶವೇ ಸ್ಥಬ್ಧವಾಗಿಬಿಟ್ಟಿತ್ತು.

14 ಗಂಟೆಗಳ ಈ ಪ್ರಾಯೋಗಿಕ ಕರ್ಫ್ಯೂ ಅವಧಿಯಲ್ಲಿ, ಅಗತ್ಯ ಸೇವೆಗಳ ಸಿಬ್ಬಂದಿ, ಕಾನೂನು ಪಾಲನಾ ಪಡೆಗಳು, ಮಾಧ್ಯಮ, ವೈದ್ಯಕೀಯ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಅನಿವಾರ್ಯ ಕೆಲಸಗಳಲ್ಲಿ ಭಾಗಿಯಾಗುವ ಮಂದಿಗೆ ಮಾತ್ರವೇ ಹೊರ ಬರಲು ಅವಕಾಶ ಕೊಡಲಾಗಿತ್ತು.

ಕ್ಯಾನ್ಸರ್​ ಪೀಡಿತ ಬಾಲಕನ ಕನಸು ನನಸು ಮಾಡಿದ ಪೊಲೀಸ್​ ಇಲಾಖೆ

ಇದೇ ದಿನದ ಸಂಜೆಯ ವೇಳೆ ಜನ ತಂತಮ್ಮ ಮನೆಗಳ ಬಾಲ್ಕನಿ/ಅಂಗಳಗಳಲ್ಲಿ ನಿಂತು ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೊಲೀಸರು, ಪೌರ ಕಾರ್ಮಿಕರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞಾಪೂರ್ವಕವಾಗಿ ತಟ್ಟೆ-ಜಾಗಟೆಗಳನ್ನು 2 ನಿಮಿಷಗಳ ಕಾಲ ಬಡಿಯಲು ಪ್ರಧಾನಿ ಮೋದಿ ಕೋರಿಕೊಂಡಿದ್ದರು.

ಈ ವೇಳೆ ಒಂದಷ್ಟು ಮಂದಿಯ ಪ್ರತಿಕ್ರಿಯೆಗಳು ಬಲೇ ಫನ್ನಿಯಾಗಿದ್ದವು. ಈ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ನೋಡಿ ಎಂಜಾಯ್ ಮಾಡಿದ್ದರು. ಇದೀಗ ಆ ದಿನಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅದೇ ಕ್ಷಣಗಳ ವಿಡಿಯೋಗಳು ನೆಟ್‌ನಲ್ಲಿ ವೈರಲ್ ಆಗಿವೆ.

https://twitter.com/sujal_jaiswal16/status/1373825066715152386?ref_src=twsrc%5Etfw%7Ctwcamp%5Etweetembed%7Ctwterm%5E1373825066715152386%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fas-janta-curfew-completes-one-year-netizens-recall-memories-of-claps-pots-and-pans%2F735542

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...