alex Certify ಕ್ಯಾನ್ಸರ್​ ಪೀಡಿತ ಬಾಲಕನ ಕನಸು ನನಸು ಮಾಡಿದ ಪೊಲೀಸ್​ ಇಲಾಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್​ ಪೀಡಿತ ಬಾಲಕನ ಕನಸು ನನಸು ಮಾಡಿದ ಪೊಲೀಸ್​ ಇಲಾಖೆ

ಮಕ್ಕಳಿಗೆ ದೊಡ್ಡವರಾದ ಮೇಲೆ ಶಿಕ್ಷಕನಾಗಬೇಕು, ವೈದ್ಯನಾಗಬೇಕು, ಪೊಲೀಸ್​ ಆಗಬೇಕು ಹೀಗೆ ನಾನಾ ಬಗೆಯ ಆಸೆಗಳು ಇರುತ್ವೆ. ಆದರೆ ಎಲ್ಲರಿಗೂ ಈ ಕನಸನ್ನ ನನಸು ಮಾಡಿಕೊಳ್ಳೋಕೆ ಸಾಧ್ಯವಾಗಲ್ಲ. ಕೆಲವೊಮ್ಮೆ ಜೀವನ ಎಷ್ಟು ಕ್ರೂರವಾಗಿಬಿಡುತ್ತೆ ಅಂದರೆ ದೊಡ್ಡ ದೊಡ್ಡ ಕನಸುಗಳನ್ನ ನನಸು ಮಾಡಿಕೊಳ್ಳೋಕೆ ಅವಕಾಶ ನೀಡೋದೇ ಇಲ್ಲ.

ಫ್ಲೋರಿಡಾದ ಮಿಯಾಮಿ ನಗರದ ಬಾಲಕ ಜೆರೆಮಿಯಾ ಎಂಬವನ ಬಾಳಲ್ಲೂ ಇದೇ ರೀತಿಯ ದುರ್ಘಟನೆ ಸಂಭವಿಸಿದೆ. ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿರುವ ಈ ಬಾಲಕ ಇನ್ನೇನು ಕೆಲವೇ ದಿನಗಳಲ್ಲಿ 5ನೇ ವರ್ಷದ ಜನ್ಮದಿನಾಚರಣೆ ಮಾಡಿಕೊಳ್ಳಲಿದ್ದಾನೆ.

ಈ ಬಾಲಕನ ಜನ್ಮದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ವಿಶೇಷ ಉಡುಗೊರೆ ನೀಡೋಕೆ ಪ್ಲಾನ್​ ಮಾಡಿದ್ದಾರೆ. ಈತ ದೊಡ್ಡವನಾದ ಮೇಲೆ ಪೊಲೀಸ್​ ಅಧಿಕಾರಿಯಾಗಬೇಕು ಎಂಬ ಕನಸನ್ನ ಹೊಂದಿದ್ದ. ಹೀಗಾಗಿ ಮಿಯಾಮಿ ಪೊಲೀಸರು ಈ ಬಾಲಕನ ಆಸೆಯನ್ನ ಈಡೇರಿಸಿದ್ದಾರೆ. ನೌಕಾ ನೀಲಿ ಬಣ್ಣದ ಸಮವಸ್ತ್ರವನ್ನ ಧರಿಸಿದ ಬಾಲಕ ಇದೀಗ ಪೊಲೀಸ್​ ಅಧಿಕಾರಿಯಾಗಿದ್ದಾನೆ.

ಪೊಲೀಸ್​ ಇಲಾಖೆ ಮುಖ್ಯಸ್ಥ ಲ್ಯಾರಿ ಜುರಿಗಾ ಪ್ರಮಾಣ ವಚನ ಬೋಧಿಸಿದ್ರು. ಈ ಮೂಲಕ ಜೆರೆಮಿಯಾ ಕನಸನ್ನ ಒಂದು ದಿನದ ಮಟ್ಟಿಗೆ ನನಸು ಮಾಡಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಬಳಿಕ ಜೆರೆಮಿಯಾ ತನ್ನ ಸಹೋದ್ಯೋಗಿಗಳೊಂದಿಗೆ ಫೋಟೋಗೆ ಪೋಸ್​ ಕೊಟ್ಟಿದ್ದಾನೆ. ಪೊಲೀಸ್​ ಅಧಿಕಾರಿಗಳು ಈ ಫೋಟೋವನ್ನ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದು ಪೋಸ್ಟ್ ಸಖತ್​ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...